ADVERTISEMENT

ಪನ್ನಾ: ಎರಡು ಹುಲಿ ಮರಿಗಳ ಜನನ

​ಪ್ರಜಾವಾಣಿ ವಾರ್ತೆ
Published 31 ಮೇ 2023, 12:34 IST
Last Updated 31 ಮೇ 2023, 12:34 IST
ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಮರಿಗಳೊಂದಿಗೆ ಕಾಣಿಸಿಕೊಂಡ ತಾಯಿ ಹುಲಿ –ಪಿಟಿಐ ಚಿತ್ರ
ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಮರಿಗಳೊಂದಿಗೆ ಕಾಣಿಸಿಕೊಂಡ ತಾಯಿ ಹುಲಿ –ಪಿಟಿಐ ಚಿತ್ರ   

ಪನ್ನಾ: ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಪಿಟಿಆರ್‌) ಹುಲಿಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.

ಪಿ–234 ಹುಲಿಯು ಅಕೋಲ ಬಫರ್ ಪ್ರದೇಶದಲ್ಲಿ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದೆ. ಮರಿಗಳು ಆರೋಗ್ಯಯುತವಾಗಿದ್ದು, ಅವುಗಳು ಜನಿಸಿ ಸುಮಾರು ನಾಲ್ಕು ತಿಂಗಳಾಗಿರಬಹುದು ಎಂದು ಪಿಟಿಆರ್‌ ಕ್ಷೇತ್ರ ನಿರ್ದೇಶಕ ಬ್ರಿಜೇಂದ್ರ ಝಾ ಮಾಹಿತಿ ನೀಡಿದರು.

ಮೇ ಮೊದಲ ವಾರದಲ್ಲಿ, ಮತ್ತೊಂದು ಹುಲಿ ಪಿ–234 (23) ಸಹ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ಹೀಗಾಗಿ ಮೇ ತಿಂಗಳಲ್ಲಿ ಪಿಟಿಆರ್‌ನಲ್ಲಿ ನಾಲ್ಕು ಮರಿಗಳು ಜನಿಸಿದಂತಾಗಿದೆ. ಇತ್ತೀಚಿನ ಗಣತಿ ಪ್ರಕಾರ ಪಿಟಿಆರ್‌ನಲ್ಲಿ 78 ಹುಲಿಗಳಿವೆ ಎಂದೂ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.