ADVERTISEMENT

ತರಗತಿಯಲ್ಲಿ ವಿದ್ಯಾರ್ಥಿನಿ ನಮಾಜು ವಿಡಿಯೊ ವೈರಲ್

ಮಧ್ಯಪ್ರದೇಶದ ಎಚ್‌ಜಿಯು ವಿವಿಯಿಂದ ತನಿಖೆಗೆ ಆದೇಶ

ಪಿಟಿಐ
Published 26 ಮಾರ್ಚ್ 2022, 15:00 IST
Last Updated 26 ಮಾರ್ಚ್ 2022, 15:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಾಗರ್, ಮಧ್ಯಪ್ರದೇಶ: ಮಧ್ಯಪ್ರದೇಶದ ಡಾ. ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ (ಎಚ್‌ಜಿಯು) ತರಗತಿಯೊಂದರಲ್ಲಿ ಮುಸ್ಲಿಂ ಬಾಲಕಿಯೊಬ್ಬಳು ಹಿಜಾಬ್ ಧರಿಸಿ ನಮಾಜು ಮಾಡಿದಂತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಸಂಬಂಧ ಶನಿವಾರ ಹಿಂದೂ ಜಾಗರಣ ಮಂಚ್ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ವಿವಿ ತನಿಖೆಗೆ ಆದೇಶಿಸಿದೆ.

ಈ ಬಗ್ಗೆ ಮಾತನಾಡಿದ ಎಚ್‌ಜಿಯು ರಿಜಿಸ್ಟ್ರಾರ್ ಸಂತೋಷ್ ಸಹಗೌರಾ ಅವರು, ‘ಈ ಬಗ್ಗೆ ಬಲಪಂಥೀಯ ಸಂಘಟನೆ ದೂರು ನೀಡಿದೆ. ಹೀಗಾಗಿ ಪ್ರಕರಣದ ತನಿಖೆಗಾಗಿ ಐವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಯು 3 ದಿನಗಳಲ್ಲಿ ವರದಿ ನೀಡಲಿದ್ದು, ಆ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ಇಲ್ಲ. ಆದರೆ ಎಲ್ಲಾ ವಿದ್ಯಾರ್ಥಿಗಳುಸಭ್ಯ ಉಡುಗೆಗಳಲ್ಲಿ ತರಗತಿಗೆ ಬರಬೇಕು ಎಂದು ಎಚ್‌ಜಿಯು ಮಾಧ್ಯಮ ಅಧಿಕಾರಿ ವಿವೇಕ್ ಜೈಸ್ವಾಲ್ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.