ADVERTISEMENT

ಕೊರೊನಾವೈರಸ್ ಪ್ರಕರಣ ಏರಿಕೆ: ಮುಂಬೈಯಲ್ಲಿ ಮದ್ಯ ಮಾರಾಟ ನಿಷೇಧ

​ಪ್ರಜಾವಾಣಿ ವಾರ್ತೆ
Published 6 ಮೇ 2020, 3:45 IST
Last Updated 6 ಮೇ 2020, 3:45 IST
ಮುಂಬೈಯ ಗೋಡೆಯೊಂದರಲ್ಲಿ ಕಂಡು ಬಂದ ಚಿತ್ರ (ಕೃಪೆ: ಏಜೆನ್ಸೀಸ್)
ಮುಂಬೈಯ ಗೋಡೆಯೊಂದರಲ್ಲಿ ಕಂಡು ಬಂದ ಚಿತ್ರ (ಕೃಪೆ: ಏಜೆನ್ಸೀಸ್)   

ಮುಂಬೈ:ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ನಗರದಲ್ಲಿ ಮದ್ಯ ಮಾರಾಟ ನಿಲ್ಲಿಸಲು ಬೃಹನ್ಮುಂಬೈಯ ಮಹಾನಗರ ಪಾಲಿಕೆನಿರ್ಧರಿಸಿದೆ.

ಅತ್ಯವಶ್ಯಕವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಮತ್ತು ಮದ್ಯದಂಗಡಿಗಳ ಕಾರ್ಯಾಚರಣೆಗೆ ಮಹಾನಗರ ಪಾಲಿಕೆ ಸಂಪೂರ್ಣ ನಿಷೇಧ ಹೇರಿದೆ.

ಮಂಗಳವಾರ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 15000 ಗಡಿ ದಾಟಿದೆ. ಹಾಗಾಗಿ ದಿನಸಿ ಮತ್ತು ಔಷಧಿ ಅಂಗಡಿಗಳನ್ನು ಮಾತ್ರ ತೆರೆಯಲಾಗುವುದು ಎಂದು ಪಾಲಿಕೆಸುತ್ತೋಲೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.