ADVERTISEMENT

ಸಿಎಎ ವಿರುದ್ಧ ಮಾತನಾಡಿದ್ದ ಸಾಹಿತಿಯನ್ನು ಪೊಲೀಸರಿಗೊಪ್ಪಿಸಿದ ಚಾಲಕನಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 11:49 IST
Last Updated 8 ಫೆಬ್ರುವರಿ 2020, 11:49 IST
ಕ್ಯಾಬ್‌ ಚಾಲಕ ರೋಹಿತ್‌ ಗೌರ್‌ ಅವರಿಗೆ ‘ಜಾಗೃತ ನಾಗರಿಕ ಪ್ರಶಸ್ತಿ’ ಪ್ರದಾನ ಮಾಡಿದ ಸ್ಥಳೀಯ ಬಿಜೆಪಿ ನಾಯಕರು
ಕ್ಯಾಬ್‌ ಚಾಲಕ ರೋಹಿತ್‌ ಗೌರ್‌ ಅವರಿಗೆ ‘ಜಾಗೃತ ನಾಗರಿಕ ಪ್ರಶಸ್ತಿ’ ಪ್ರದಾನ ಮಾಡಿದ ಸ್ಥಳೀಯ ಬಿಜೆಪಿ ನಾಯಕರು   

ಮುಂಬೈ: ಉಬರ್‌ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಎ ವಿರುದ್ಧದ ಪ್ರತಿಭಟನೆಗಳ ಕುರಿತು ಮಾತನಾಡಿದ್ದ ಸಾಹಿತಿ ಬಪ್ಪಾದಿತ್ಯ ಸರ್ಕಾರ್‌ ಅವರನ್ನು ಪೊಲೀಸರಿಗೊಪ್ಪಿಸಿದ ಚಾಲಕನಿಗೆ ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಮಂಗಲ್‌ ಪ್ರಭಾತ್‌ ಲೋಧಾ ಅವರು ಶನಿವಾರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕ್ಯಾಬ್‌ ಚಾಲಕ ರೋಹಿತ್‌ ಗೌರ್‌ ಅವರಿಗೆಸಾಂತಾಕ್ರೂಜ್‌ ಪೊಲೀಸ್‌ ಠಾಣೆಯಲ್ಲಿ ಅವರು ‘ಜಾಗೃತ ನಾಗರಿಕ ಪ್ರಶಸ್ತಿ’ ಪ್ರದಾನ ಮಾಡಿದರು.

‘ಬಪ್ಪಾದಿತ್ಯ ಅವರು ಸಿಎಎ ವಿರುದ್ಧ ದೇಶ ವಿರೋಧಿ ಪಿತೂರಿ ನಡೆಸಿದ್ದಾರೆ’ ಎಂದು ಮಂಗಲ್‌ ಪ್ರಭಾತ್‌ ಆರೋಪಿಸಿದ್ದಾರೆ.

ADVERTISEMENT

ರೋಹಿತ್‌ ಅವರನ್ನು ಸನ್ಮಾನ ಮಾಡುವ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಏನಿದು ಘಟನೆ?

ಸಾಹಿತಿ ಬಪ್ಪಾದಿತ್ಯ ಸರ್ಕಾರ್‌ ಅವರು ಉಬರ್‌ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಸಿಎಎ ವಿರುದ್ಧದ ಪ್ರತಿಭಟನೆಗಳ ಕುರಿತು ಗೆಳೆಯನೊಂದಿಗೆಮಾತನಾಡಿದ್ದರು.

ಸಾಹಿತಿ ಬಪ್ಪಾದಿತ್ಯ ಸರ್ಕಾರ್‌ (23) ಜೈಪುರದವರಾಗಿದ್ದು, ಫೆ.3ರಂದು ಕಾಲಾ ಘೋಡ ಉತ್ಸವದಲ್ಲಿ ಕವನ ವಾಚಿಸಲು ಬಂದಿದ್ದರು. ಕಾರ್ಯಕ್ರಮದ ನಂತರ ಜುಹುನಿಂದ ಕುರ್ಲಾಗೆ ರಾತ್ರಿ 10.30ರ ವೇಳೆಗೆ ಉಬರ್‌ ಕ್ಯಾಬ್‌ನಲ್ಲಿ ಪ್ರಯಾಣ ಬೆಳೆಸಿದ್ದರು.

ಗೆಳೆಯನೊಂದಿಗೆ ಸರ್ಕಾರ್‌ ಅವರು ಸಿಎಎ ವಿರುದ್ಧ ಮಾತನಾಡುತ್ತಿದ್ದುದನ್ನು ಗಮನಿಸಿದ ಚಾಲಕನು ಎಟಿಎಂನಿಂದ ಹಣ ತರುವ ನೆಪವೊಡ್ಡಿ ತೆರಳಿದ್ದನು. ಕೆಲ ನಿಮಿಷಗಳ ನಂತರ ಪೊಲೀಸರೊಂದಿಗೆ ಆಗಮಿಸಿ, ತಮಟೆ ಕೊಂಡೊಯ್ಯಲು ಕಾರಣವೇನು ಎಂದು ಸರ್ಕಾರ್‌ ಅವರಿಗೆ ಪ್ರಶ್ನಿಸಿದ್ದಾನೆ. ‘ಈತ ಕಮ್ಯುನಿಸ್ಟ್‌ ಆಗಿದ್ದು ಇವನನ್ನು ಠಾಣೆಗೆ ಎಳೆದೊಯ್ಯಿರಿ’ ಎಂದು ಪೊಲೀಸರಿಗೆ ಸೂಚಿಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.