ADVERTISEMENT

ಅಕ್ರಮ ನಿರ್ಮಾಣ: ರಾಣಾ ದಂಪತಿಗೆ ಬಿಎಂಸಿ ನೋಟಿಸ್‌

ಪಿಟಿಐ
Published 3 ಮೇ 2022, 13:02 IST
Last Updated 3 ಮೇ 2022, 13:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಶಾಸಕ ರಾಣಾ ಹಾಗೂ ಪತ್ನಿ ನವನೀತ್‌ ರಾಣಾ ಅವರ ಮನೆಯಲ್ಲಿ ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲುಬೃಹನ್‌ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ನೋಟಿಸ್‌ ಜಾರಿ ಮಾಡಿದೆ.

ಖಾರ್‌ ಪ್ರದೇಶದ ಲಾವಿ ವಸತಿ ಆವರಣದಲ್ಲಿ, ರಾಣಾ ಅವರು ಅಕ್ರಮವಾಗಿ ನಿರ್ಮಿಸಿದ್ದಾರೆ ಎಂದು ಎಚ್‌–ವೆಸ್ಟ್‌ ವಾರ್ಡ್‌ನ ಹಿರಿಯ ಅಧಿಕಾರಿಯೊಬ್ಬರು ದೂರು ನೀಡಿದ್ದರು. ಆದ್ದರಿಂದ ಬಿಎಂಸಿ ಕಾಯಿದೆ 1888, ಸೆಕ್ಷನ್‌ 488ರ ಅಡಿಯಲ್ಲಿ ಈ ನೋಟಿಸ್‌ ಜಾರಿ ಮಾಡಲಾಗಿದೆ.

ನೋಟಿಸ್‌ನಲ್ಲಿ, ಪಾಲಿಕೆ ಅಧಿಕಾರಿಗಳು ನೋಟಿಸ್‌ನಲ್ಲಿ ಸೂಚಿಸಲಾದ ವಸತಿ ಪ್ರದೇಶವನ್ನು ಪರೀಶೀಲನೆ, ಸಮೀಕ್ಷೆ ಹಾಗೂ ಅವಶ್ಯಕ ಕೆಲಸದ ನಿರ್ವಹಣೆಗಾಗಿ ಯಾವುದೇ ಸಮಯದಲ್ಲಿ ಪ್ರವೇಶಿಸಬಹುದು ಎಂದು ತಿಳಿಸಲಾಗಿದೆ.ಸದ್ಯ ರಾಣಾ ದಂಪತಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.