ಮಾದಕ ವಸ್ತು
(ಐಸ್ಟೋಕ್ ಚಿತ್ರ)
ಮುಂಬೈ: ಮುಂಬೈ ಪೊಲೀಸರು ನಡೆಸಿದ ದಾಳಿಯಲ್ಲಿ ₹24.47 ಕೋಟಿ ಮೌಲ್ಯದ 12.6 ಕೆ.ಜಿ ಮೆಫೆಡ್ರೋನ್ (ಮಾದಕ ವಸ್ತು) ವಶಪಡಿಸಿಕೊಂಡಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮುಂಬೈ, ನವಿ ಮುಂಬೈ ಮತ್ತು ಕರ್ಜತ್‌ನಲ್ಲಿ ಮೂರು ತಿಂಗಳ ಅವಧಿಯಲ್ಲಿ ನಡೆದ ವಿವಿಧ ದಾಳಿಯಲ್ಲಿ 12.6 ಕೆ.ಜಿ ಮೆಫೆಡ್ರೋನ್ (ಎಂಡಿ) ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಖಚಿತ ಮಾಹಿತಿ ಆಧಾರಿಸಿ ಮೇ 15ರಂದು ನವಿ ಮುಂಬೈನಲ್ಲಿ ದಾಳಿ ನಡೆಸಿ ₹13.37 ಕೋಟಿ ಮೌಲ್ಯದ 6 ಕೆ.ಜಿಗೂ ಅಧಿಕ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ₹11 ಕೋಟಿಗೂ ಹೆಚ್ಚು ಮೌಲ್ಯದ 5.5 ಕೆ.ಜಿ ಎಂಡಿ ಮತ್ತು ಮಾದಕವಸ್ತು ತಯಾರಿಸಲು ಬಳಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಮಾರ್ಚ್‌ನಲ್ಲಿ ಚೆಂಬೂರಿನಲ್ಲಿ 45 ಗ್ರಾಂ ಎಂಡಿಯೊಂದಿಗೆ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.