ADVERTISEMENT

ಮುಂಬೈ | ಭಾರಿ ಮಳೆಯಿಂದಾಗಿ ಸರಕು ಸಾಗಣೆ ರೈಲುಗಳು ಸ್ಥಗಿತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 12:21 IST
Last Updated 15 ಸೆಪ್ಟೆಂಬರ್ 2025, 12:21 IST
<div class="paragraphs"><p>ಚಿತ್ರ ಕೃಪೆ : ಪ್ರಾತಿನಿಧಿಕ ಚಿತ್ರ</p></div>

ಚಿತ್ರ ಕೃಪೆ : ಪ್ರಾತಿನಿಧಿಕ ಚಿತ್ರ

   

ಮುಂಬೈ: ಥಾಣೆ ಜಿಲ್ಲೆ ಸೇರಿದಂತೆ ಅನೇಕ ಕಡೆ ಭಾರಿ ಮಳೆ ಆಗಿದ್ದರಿಂದ ಪ್ರಯಾಣಿಕ ರೈಲು ಹಳ್ಳಿ ತಪ್ಪಿದೆ. ಇದರ ಪರಿಣಾಮ ಸರಕು ಸಾಗಣೆ ರೈಲುಗಳು ಸ್ಥಗಿತಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾದಲ್‌ಪುರ – ಅಂಬರ್‌ನಾಥ್ ಸಂಚರಿಸುವ ರೈಲು ತೀವ್ರ ಮಳೆಯಿಂದ ಹಳ್ಳಿ ತಪ್ಪಿದ್ದು, ಸಿಎಸ್‌ಎಂಟಿಗೆ ಹೋಗುವ ಮಾರ್ಗದಲ್ಲಿ ಸಿಲುಕಿಕೊಂಡಿವೆ.

ADVERTISEMENT

ಸಹಾಯಕ ಎಂಜಿನ್ ಕಳುಹಿಸಿ ಅದನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನ ಲ್ಲಿ ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ.

ದಾದರ್, ಬೈಕುಲ್ಲಾ, ಕುರ್ಲಾ, ಸಿಯಾನ್ ರೈಲು ನಿಲ್ದಾಣದಲ್ಲಿ ಜಲಾವೃತ ಗೊಂಡಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.