ADVERTISEMENT

ಮುಂಬೈ | ತಾಜ್ ಹೋಟೆಲ್‌ಗೆ ಪಾಕ್‌ನಿಂದ ಬಾಂಬ್ ಬೆದರಿಕೆ ಕರೆ, ಬಿಗಿ ಭದ್ರತೆ

ಏಜೆನ್ಸೀಸ್
Published 30 ಜೂನ್ 2020, 10:19 IST
Last Updated 30 ಜೂನ್ 2020, 10:19 IST
ತಾಜ್ ಹೋಟೆಲ್ (ಸಂಗ್ರಹ ಚಿತ್ರ)
ತಾಜ್ ಹೋಟೆಲ್ (ಸಂಗ್ರಹ ಚಿತ್ರ)   

ಮುಂಬೈ: ಬಾಂಬ್‌ ದಾಳಿಯ ಬೆದರಿಕೆ ಕರೆ ಹಿನ್ನೆಲೆಯಲ್ಲಿ ದಕ್ಷಿಣ ಮುಂಬೈನ ತಾಜ್ ಹೋಟೆಲ್‌ಗೆ ಭದ್ರತೆ ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹೋಟೆಲ್‌ ಮೇಲೆ 2008ರ ನವೆಂಬರ್‌ 16ರಂದು ಭಯೋತ್ಪಾದಕ ದಾಳಿ ನಡೆದಿತ್ತು.

ಮಂಗಳವಾರ ರಾತ್ರಿ 12.30ರ ವೇಳೆಗೆ ಪಾಕಿಸ್ತಾನದ ಕರಾಚಿಯಿಂದ ಮಾತನಾಡುತ್ತಿರುವುದಾಗಿ ಹೇಳಿಕೊಂಡು ದೂರವಾಣಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ಹೋಟೆಲ್ ಮೇಲೆ ದಾಳಿ ನಡೆಯಲಿದೆ ಎಂದು ಹೇಳಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ದೂರವಾಣಿ ಕರೆ ಬಂದ ಕೂಡಲೇ ಹೋಟೆಲ್ ಮ್ಯಾನೇಜ್‌ಮೆಂಟ್‌ನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಟೆಲ್‌ಗೆ ಭದ್ರತೆ ಹೆಚ್ಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ಮುಂಬೈ ಪೊಲೀಸರು ಕಟ್ಟೆಚ್ಚರದಿಂದ ಇದ್ದಾರೆ. ತಾಜ್ ಹೋಟೆಲ್‌ ಆವರಣದಲ್ಲಿ ಮಾತ್ರವಲ್ಲದೆ ಪ್ರಮುಖ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪಾಕಿಸ್ತಾನದ ಕರಾಚಿಯಲ್ಲಿ ಉಗ್ರ ದಾಳಿ ನಡೆದ ಬೆನ್ನಲ್ಲೇ ಬೆದರಿಕೆ ಕರೆ ಬಂದಿರುವುದು ಆತಂಕ ಸೃಷ್ಟಿಸಿದೆ ಎಂದೂ ಅವರು ಹೇಳಿದ್ದಾರೆ.

ಕರೆ ಬಂದಿದ್ದು ಪಾಕಿಸ್ತಾನದಿಂದ

ತಾಜ್ ಮಹಲ್ ಪ್ಯಾಲೇಸ್‌ಗೆ ಮೊದಲು ಬಂದ ಕರೆ ಪಾಕಿಸ್ತಾನದ ನಂಬರ್‌ನಿಂದಾಗಿತ್ತು. ಇದಾದನಂತರ ಬಾಂದ್ರಾದಲ್ಲಿರುವ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್‌ಗೆ ಇನ್ನೊಂದು ಕರೆ ಬಂದಿದ್ದು ಇವೆರಡೂ ನಂಬರ್‌ಗಳು ಪಾಕಿಸ್ತಾನದ್ದಾಗಿದೆ ಎಂದು ಟೈಮ್ಸ್ ನೌ ಪತ್ರಿಕೆ ವರದಿ ಮಾಡಿದೆ.ಲಷ್ಕರ್-ಎ-ತಯಬಾ ಉಗ್ರ ಸಂಘಟನೆಯ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿ ಕರೆ ಮಾಡಿದ್ದಾನೆಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.