ADVERTISEMENT

ಮುಸ್ಲಿಂ ವಿವಾಹವನ್ನು ಪೋಕ್ಸೊದಿಂದ ಹೊರಗಿಟ್ಟಿಲ್ಲ: ಕೇರಳ ಹೈಕೋರ್ಟ್‌

ಪಿಟಿಐ
Published 21 ನವೆಂಬರ್ 2022, 15:56 IST
Last Updated 21 ನವೆಂಬರ್ 2022, 15:56 IST

ಕೊಚ್ಚಿ: ‘ವೈಯಕ್ತಿಕ ಕಾನೂನಿನಡಿಯಲ್ಲಿ ನಡೆಯುವ ಮುಸ್ಲಿಂ ವಿವಾಹಗಳನ್ನು ಪೋಕ್ಸೊ ಕಾಯ್ದೆಯಿಂದ ಹೊರಗಿಡಲಾಗದು ಹಾಗೂ ಮದುವೆಯ ಹೆಸರಿನಲ್ಲಿ ಬಾಲಕಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯು ಅಪರಾಧವಾಗುತ್ತದೆ’ ಎಂದು ಕೇರಳ ಹೈಕೋರ್ಟ್ ಹೇಳಿದೆ.‌

15 ವರ್ಷದ ಬಾಲಕಿಯನ್ನು ಮದುವೆಯಾಗಿ, ಬಂಧಿತನಾಗಿರುವ 31 ವರ್ಷದ ವ್ಯಕ್ತಿಗೆ ಜಾಮೀನು ನಿರಾಕರಿಸಿರುವನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರು, ‘ಬಾಲ್ಯವಿವಾಹ ಸಮಾಜಕ್ಕೆ ಅಂಟಿದ ಶಾಪವಾಗಿದೆ. ಮದುವೆಯ ಹೆಸರಿನಲ್ಲಿ ಮಗುವಿನೊಂದಿಗೆ ನಡೆಸುವ ದೈಹಿಕ ಸಂಪರ್ಕವು ಪೋಕ್ಸೊ ಕಾಯ್ದೆಯಡಿ ನಿಷೇಧಿತವಾಗಿದೆ’ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಗರ್ಭಿಣಿಯಾಗಿದ್ದ ಬಾಲಕಿಯು ಪತ್ತನಂತಿಟ್ಟ ಜಿಲ್ಲೆಯ ಕವಿಯೂರ್‌ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಹೋಗಿದ್ದಳು. ಆಗ ಆಧಾರ್‌ ಕಾರ್ಡ್‌ನಲ್ಲಿ ಆಕೆಯ ವಯಸ್ಸನ್ನು ಗಮನಿಸಿದ್ದ ವೈದ್ಯಾಧಿಕಾರಿಯು ಪೊಲೀಸರಿಗೆ ಮಾಹಿತಿ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.