ADVERTISEMENT

ಪ್ರಧಾನಿ ಮೋದಿ 75ನೇ ಜನ್ಮ ದಿನ: ‘ನಮೋ ಯುವ ರನ್‌’ಗೆ ಚಾಲನೆ

ಪಿಟಿಐ
Published 7 ಸೆಪ್ಟೆಂಬರ್ 2025, 14:46 IST
Last Updated 7 ಸೆಪ್ಟೆಂಬರ್ 2025, 14:46 IST
<div class="paragraphs"><p>ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಅಭಿಯಾನದ ರಾಯಭಾರಿ, ನಟ ಮಿಲಿಂದ್‌ ಸೋಮನ್‌ ಅವರು ‘ನಮೋ ಯುವ ರನ್‌’ ಅಭಿಯಾನಕ್ಕೆ ಚಾಲನೆ ನೀಡಿದರು</p></div>

ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಅಭಿಯಾನದ ರಾಯಭಾರಿ, ನಟ ಮಿಲಿಂದ್‌ ಸೋಮನ್‌ ಅವರು ‘ನಮೋ ಯುವ ರನ್‌’ ಅಭಿಯಾನಕ್ಕೆ ಚಾಲನೆ ನೀಡಿದರು

   

 –ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮ ದಿನಾಚರಣೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾವು ‘ನಮೋ ಯುವ ರನ್‌’ ಎಂಬ ಅಭಿಯಾನವನ್ನು ಆರಂಭಿಸಿದೆ.

ADVERTISEMENT

ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಅಭಿಯಾನದ ರಾಯಭಾರಿ, ನಟ ಮಿಲಿಂದ್‌ ಸೋಮನ್‌ ಅವರು ದೆಹಲಿಯಲ್ಲಿನ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿದರು.

‘ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವಂತೆ ಮತ್ತು ಮಾದಕ ವಸ್ತುಗಳಿಂದ ದೂರವಿರುವಂತೆ ಯುವಕರನ್ನು ಪ್ರೇರೇಪಿಸಲು ಈ ಅಭಿಯಾನವನ್ನು ಆರಂಭಿಸಲಾಗಿದೆ. ಪ್ರತಿವರ್ಷ ಮೋದಿ ಅವರ ಜನ್ಮದಿನವಾದ ಸೆಪ್ಟೆಂಬರ್‌ 17ರಿಂದ ಅಕ್ಟೋಬರ್‌ 2ರವರೆಗೆ ನಡೆಯುವ ‘ಸೇವಾ ಪಾಕ್ಷಿಕ’ದ ಭಾಗವಾಗಿ ‘ನಮೋ ಯುವ ರನ್‌’ ಆಯೋಜಿಸಲಾಗಿದೆ’ ಎಂದು ಮಾಂಡವೀಯ ಅವರು ತಿಳಿಸಿದರು.

‘ನಶೆಮುಕ್ತ ಭಾರತ’ ಧ್ಯೇಯದೊಂದಿಗೆ ದೇಶದ 100 ನಗರಗಳಲ್ಲಿ ಸೆಪ್ಟೆಂಬರ್ 21ರಂದು ‘ನಮೋ ಯುವ ರನ್‌’ ನಡೆಯಲಿದೆ. ಪ್ರತಿ ಸ್ಥಳದಲ್ಲಿ 10 ಸಾವಿರದಿಂದ 15 ಸಾವಿರದವರೆಗೆ ಯುವಕರು ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ’ ಎಂದು ತೇಜಸ್ವಿ ಸೂರ್ಯ ಹೇಳಿದರು.

ಅಭಿಯಾನದ ಅಧಿಕೃತ ನೋಂದಣಿ ವೆಬ್‌ಸೈಟ್‌(www.namoyuvarun.com), ಲಾಂಛನ, ಮಸ್ಕಾಟ್‌ ಮತ್ತು ಟಿ–ಶರ್ಟ್‌ಗಳನ್ನು ಇದೇ ವೇಳೆ ಅನಾವರಣಗೊಳಿಸಲಾಯಿತು.

‘ನಮೋ ಯುವ ರನ್‌’ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಅಭಿಯಾನದ ರಾಯಭಾರಿ ನಟ ಮಿಲಿಂದ್‌ ಸೋಮನ್‌ ಅವರು ‘ಪುಶ್‌ ಅಪ್‌’ ಮಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.