ADVERTISEMENT

ತಂದೆಯ ವಿರುದ್ಧ ಮಿಟೂ ಆರೋಪವಿದ್ದರೂ ಆಂದೋಲನಕ್ಕೆ ನಂದಿತಾ ದಾಸ್‌ ಬೆಂಬಲ

ಏಜೆನ್ಸೀಸ್
Published 17 ಅಕ್ಟೋಬರ್ 2018, 9:44 IST
Last Updated 17 ಅಕ್ಟೋಬರ್ 2018, 9:44 IST
ನಂದಿತಾ ದಾಸ್‌
ನಂದಿತಾ ದಾಸ್‌   

ಮುಂಬೈ: ಸದ್ಯ ದೇಶದಾದ್ಯಂತ ಸದ್ದು ಮಾಡುತ್ತಿರುವ ಮಿಟೂ ಆಂದೋಲನಕ್ಕೆ ನನ್ನ ಬೆಂಬಲವಿರುವುದಾಗಿಬಾಲಿವುಡ್‌ ನಟಿ ನಂದಿತಾ ದಾಸ್‌ ಹೇಳಿದ್ದಾರೆ.

ಇದೇ ಆಂದೋಲನದಲ್ಲಿತನ್ನ ತಂದೆ ವಿರುದ್ಧ ಆರೋಪ ಕೇಳಿ ಬಂದಿದ್ದರೂ, ಮಿಟೂ ಬೆಂಬಲಿಸುವುದಾಗಿ ನಂದಿತಾ ಹೇಳಿದ್ದಾರೆ.ಈ ಸಂಬಂಧ ಮಂಗಳವಾರ ತಮ್ಮ ಫೇಸ್‌ಬುಕ್‌ಪೋಸ್ಟ್‌ವೊಂದನ್ನು ಪ್ರಕಟಿಸಿದ್ದು,‘ನನ್ನನ್ನುಹಲವರು ಸ್ನೇಹಿತರು ಹಾಗೂ ಅಪರಿಚಿತರು ಸ್ಪರ್ಶಿಸಿದ್ದಾರೆ. ನನ್ನ ಪ್ರಾಮಾಣಿಕತೆಯ ಬಗ್ಗೆ ಅವರಿಗೆ ಕಾಳಜಿ ಇದೆ. ಸತ್ಯ ಮೇಲುಗೈ ಸಾಧಿಸುತ್ತದೆ ಎಂದು ನಂಬಿದ್ದೇನೆ’ ಎಂದಿದ್ದಾರೆ.

‘ಈ ಆಂದೋಲನ ಮುಕ್ತವಾಗಿ ಮಾತನಾಡುವ ಹಾದಿಯನ್ನು ತೆರೆದುಕೊಟ್ಟಿದೆ. ಆರೋಪ ಮಾಡುವ ಮುನ್ನ ಅದರಲ್ಲಿನ ಸತ್ಯದ ಅರಿವು ಗಟ್ಟಿಗೊಂಡಿರಬೇಕು. ಹುರುಳಿರದಆರೋಪಗಳಿಂದ ಆಂದೋಲನದ ತೀವ್ರತೆಯನ್ನು ಕದಡಿದಂತೆ ಆಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ADVERTISEMENT

ಇದಕ್ಕೂ ಮುನ್ನನಿಶಾ ಬೋರಾ ಎಂಬುವವರು ಹಿರಿಯ ಕಲಾವಿದಜತಿನ್ ದಾಸ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪವನ್ನು ಮಾಡಿದ್ದಾರೆ.

‘2004ರಲ್ಲಿ ದೆಹಲಿಯಲ್ಲಿ ಜತಿನ್ ದಾಸ್‌ ಅವರನ್ನು ಔತಣ ಕೂಟದಲ್ಲಿ ಭೇಟಿಯಾಗಿದ್ದೆ. ಆಗ ನನಗೆ 28 ವರ್ಷ,ಜತಿನ್ ದಾಸ್ ಅವರ ಪೇಂಟಿಂಗ್ ನೋಡಿ ಆಕರ್ಷಿತಳಾಗಿದ್ದೆ. ಕೆಲವು ದಿನಗಳವರೆಗೆ ನನ್ನ ಕಾರ್ಯಗಳಲ್ಲಿ ಸಹಕರಿಸುವಿರಾ ಎಂದು ಜತಿನ್‌ ಕೇಳಿದ್ದರು. ದೊಡ್ಡ ಕಲಾವಿದರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದು ನನ್ನ ಭಾಗ್ಯವೆಂದೇ ತಿಳಿದೆ. ಅವರ ಸ್ಟುಡಿಯೊಗೆ ಹೋಗಿ ಆಯೋಜನೆಯ ಕಾರ್ಯದಲ್ಲಿ ಸಹಕರಿಸಿದೆ. ಆದರೆ, ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು.

...ನನ್ನನ್ನು ತಬ್ಬಲು ಪ್ರಯತ್ನಿಸಿದರು. ನಾನು ಅವರಿಂದ ಬಿಡಿಸಿಕೊಂಡೆ, ಮತ್ತೇ ಅದನ್ನೇ ಪುನರಾವರ್ತಿಸಿದರು...ಅವರನ್ನು ತಳ್ಳಿ ನಾನು ದೂರ ಓಡಿದೆ.

ಆ ಕ್ಷಣದಲ್ಲಿ ಅವರು, ಬಾ ಇದೊಂದು ಉತ್ತಮ ಅನುಭವ ಎನ್ನುವ ರೀತಿ ಮಾತನ್ನಾಡಿದ್ದರು. ಅವರನ್ನು ತಳ್ಳಿ ನನ್ನ ಬ್ಯಾಗ್‌ ಎಳೆದುಕೊಂಡು ಮನೆಗೆ ಓಡಿದ್ದೆ. ಆ ಬಗ್ಗೆ ನಾನು ಈವರೆಗೂ ಮಾತನಾಡಿರಲಿಲ್ಲ’ ಎಂದು ಟ್ವಿಟರ್‌ನಲ್ಲಿ ಪತ್ರ ಪ್ರಕಟಿಸಿದ್ದಾರೆ.

ಆರೋಪಸಂಬಂಧ ಪ್ರತಿಕ್ರಿಯಿಸಿರುವ ಜತಿನ್‌ ದಾಸ್‌, ‘ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಂದ ಆಶ್ಚರ್ಯಚಕಿತನಾಗಿದ್ದೇನೆ. ನನಗೆ ಆಕೆ ಯಾರು ಎನ್ನುವುದು ಗೊತ್ತಿಲ್ಲ. ಅವರನ್ನು ಎಂದಿಗೂ ಭೇಟಿ ಮಾಡಿಲ್ಲ. ಒಂದು ವೇಳೆನಾನು ಅವರನ್ನು ಭೇಟಿ ಮಾಡಿದ್ದರೂ ಕೂಡ ಅಸಭ್ಯವಾಗಿ ವರ್ತಿಸಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.