ADVERTISEMENT

11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರ 'ಮನ್‌ ಕೀ ಬಾತ್'

​ಪ್ರಜಾವಾಣಿ ವಾರ್ತೆ
Published 31 ಮೇ 2020, 3:12 IST
Last Updated 31 ಮೇ 2020, 3:12 IST
   

ನವದೆಹಲಿ: ನಾಲ್ಕನೇ ಹಂತದ ದೇಶವ್ಯಾಪಿ ಲಾಕ್‌ಡೌನ್‌ನ ಕೊನೆಯ ದಿನವಾದ ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಎರಡು ತಿಂಗಳಿನಿಂದ ಲಾಕ್‍ಡೌನ್‌ನಲ್ಲಿದ್ದು, ಜೂನ್ 1ರಿಂದ ಲಾಕ್‍ಡೌನ್ ಸಡಿಲಿಕೆ ಆಗಲಿದೆ. ಮನ್ ಕೀ ಬಾತ್‌ನಲ್ಲಿ ಲಾಕ್‍ಡೌನ್ ಸಡಿಲಿಕೆ ಬಗ್ಗೆ ಮೋದಿ ಮಾತನಾಡಲಿದ್ದಾರೆ ಎಂಬ ನಿರೀಕ್ಷೆ ಇದೆ.

ಕೊರೊನಾವೈರಸ್ ಹರಡುವಿಕೆ ನಿಯಂತ್ರಿಸಲು ಮಾರ್ಚ್ 24ರಂದು ಲಾಕ್‍ಡೌನ್ ಘೋಷಣೆ ಮಾಡಲಾಗಿತ್ತು. ಆನಂತರ ಅದನ್ನು ಮೇ 31ರ ವರೆಗೆ ವಿಸ್ತರಿಸಲಾಗಿತ್ತು.

ADVERTISEMENT

ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೇರಿ ಶನಿವಾರ ಒಂದು ವರ್ಷ ಪೂರ್ತಿಗೊಳಿಸಿದ್ದು, ಅದರ ಬೆನ್ನಲ್ಲೇ 'ಮನ್ ಕೀ ಬಾತ್‌'ನ 65ನೇ ಸಂಚಿಕೆ ಇವತ್ತು ಪ್ರಸಾರವಾಗಲಿದೆ.

ಶನಿವಾರ ಕೋವಿಡ್-19 ಪ್ರಕರಣಗಳ ಸಂಖ್ಯೆ 7,964 ವರದಿಯಾಗಿದ್ದು ದೇಶದಲ್ಲಿ ಸೋಂಕಿತರ ಸಂಖ್ಯೆ 173763ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.