ADVERTISEMENT

ನಾನು ತಪ್ಪು ಮಾಡಿದರೆ ನನ್ನ ನಿವಾಸದ ಮೇಲೂ ಐಟಿ ದಾಳಿ ನಡೆಸಿ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 10:54 IST
Last Updated 26 ಏಪ್ರಿಲ್ 2019, 10:54 IST
   

ಸಿಧಿ (ಮಧ್ಯ ಪ್ರದೇಶ): ನಾನೇನಾದರೂ ತಪ್ಪು ಮಾಡಿದರೆ ನನ್ನ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೆ ಮುನ್ನ ವಿವಿಧ ನಾಯಕರ ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದಕ್ಕೆ ವಿಪಕ್ಷಗಳು ಮೋದಿಯನ್ನು ಟೀಕಿಸಿದ್ದವು. ಈ ಟೀಕೆಗೆ ಪ್ರತಿಕ್ರಿಯಿಸಿದ ಮೋದಿ, ಐಟಿ ದಾಳಿ ನಡೆಸಿದ ನಂತರ ಕಾಂಗ್ರೆಸ್ ನೇತಾರರೊಬ್ಬರು ಕೇಳಿದ್ದರು 'ನಾವು ರಾಜಕಾರಣಿಗಳು ನೀವು ನಮ್ಮ ನಿವಾಸದ ಮೇಲೆ ಯಾಕೆ ದಾಳಿ ನಡೆಸುತ್ತೀರಾ?'ಎಂದು.ದೇಶದ ಕಾನೂನು ಎಲ್ಲರಿಗೂ ಸಮಾನವಾಗಿದೆ. ಮೋದಿ ಏನಾದರೂ ತಪ್ಪು ಮಾಡಿದರೆ ಅಲ್ಲಿಯೂ ಐಟಿ ದಾಳಿ ನಡೆಸಲಿ.ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದು ಮಧ್ಯಪ್ರದೇಶದ ರ‍್ಯಾಲಿಯಲ್ಲಿ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ ನಂತರ ಭೋಪಾಲದಿಂದ 570 ಕಿಮೀ ದೂರವಿರುವ ಸಿಧಿಯಲ್ಲಿ ಮೋದಿ ಸಾರ್ವಜನಿಕ ರ‍್ಯಾಲಿ ನಡೆಸಿದ್ದಾರೆ.

ADVERTISEMENT

ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ತುಘ್ಲಕ್ ರಸ್ತೆ ಚುನಾವಣಾ ಹಗರಣದ ಹಣವನ್ನು ಕುಟುಂಬ ರಾಜಕಾರಣದ ರಾಜಕೀಯ ಪ್ರಚಾರಕ್ಕಾಗಿ ಬಳಸಲಾಗುತ್ತದೆ ಎಂದಿದ್ದಾರೆ.

ದೆಹಲಿಯಿಂದ ಭೋಪಾಲ್, ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರವೇ ಅವರ ನಡವಳಿಕೆ ಆಗಿದೆ.ನಿಮ್ಮ ಚೌಕೀದಾರ ಜಾಗರೂಕನಾಗಿದ್ದಾನೆ.ನಾಮ್‌ದಾರ್ ಆಗಲೀ ಅವರ ನಿಷ್ಠಾವಂತರಾಗಲೀ ಯಾರನ್ನೂ ಬಿಡುವುದಿಲ್ಲ.

ನಿಮ್ಮ ಚೌಕೀದಾರ್ ಮಹಿಳೆಯರ ಸಬಲೀಕರಣಕ್ಕೆಬದ್ಧನಾಗಿದ್ದಾನೆ.ದೇಶದಲ್ಲಿರುವ ಎಲ್ಲ ವಯೋಮಿತಿಯ ಹೆಣ್ಣುಮಕ್ಕಳು ಮತ್ತು ಸಹೋದರಿಯರ ರಕ್ಷಣೆ ಮತ್ತು ಶ್ರೇಯಾಭಿವೃದ್ದಿಗಾಗಿ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿದೆ. ಅತ್ಯಾಚಾರದಂತಾ ಭೀಕರ ಕೃತ್ಯಗಳಿಗೆ ಮರಣದಂಡನೆ ನೀಡುತ್ತೇವೆ. ಈ ಚೌಕೀದಾರ್ ಮೇಲೆ ಭಾರತದ ಹೆಣ್ಣು ಮಕ್ಕಳಿಗೆ ಸಂಪೂರ್ಣ ನಂಬಿಕೆ ಇದೆ.ಆದ್ದರಿಂದಲೇ ಇದೇ ಮೊದಲ ಬಾರಿ ದೇಶದ ಗಡಿಭಾಗದಲ್ಲಿ ಮಹಿಳಾ ಸೇನಾಪಡೆಯನ್ನು ನಿಯೋಜಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.