ADVERTISEMENT

ಶೀಘ್ರದಲ್ಲೇ ಮಣಿಪುರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ: ವರದಿ

ಶೆಮಿನ್ ಜಾಯ್‌
Published 31 ಆಗಸ್ಟ್ 2025, 6:18 IST
Last Updated 31 ಆಗಸ್ಟ್ 2025, 6:18 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ಭೇಟಿ ನೀಡುವ ಸಾಧ್ಯತೆ ಇದೆ.

ಈಶಾನ್ಯ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದ 28 ತಿಂಗಳ ಬಳಿಕ ಮೊದಲ ಬಾರಿಗೆ ಪ್ರಧಾನಿ ಭೇಟಿ ನೀಡಲಿದ್ದಾರೆ.

ADVERTISEMENT

ರಾಜಧಾನಿ ಇಂಫಾಲ ಹಾಗೂ ಚುರಾಚಾಂದಪುರಕ್ಕೆ ಭೇಟಿ ನೀಡಲಿದ್ದು, 2023ರ ಮೇ 3ರಂದು ಪ್ರಾರಂಭವಾದ ಹಿಂಸಾಚಾರದಲ್ಲಿ ಸ್ಥಳಾಂತರಗೊಂಡ ಜನರನ್ನು ಭೇಟಿಯಾಗುವ ಸಾಧ್ಯತೆ ಇದೆ.

ಸೆ.12 ಹಾಗೂ 14ರ ನಡುವೆ ನಿಗದಿಯಾಗಿರುವ ಮಿಜೋರಾಂ ಹಾಗೂ ಅಸ್ಸಾಂ ಪ್ರವಾಸದೊಂದಿಗೆ ಮಣಿಪುರ ಭೇಟಿಯು ಸೇರ್ಪಡೆಗೊಳ್ಳಲಿದ್ದು, ಅಲ್ಲಿ ಕೆಲ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸುವ ನಿರೀಕ್ಷೆ ಇದೆ. ಮೋದಿ ಭೇಟಿ ಕಾರಣಕ್ಕೆ ರಾಜ್ಯದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಮಣಿಪುರದ ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದಲ್ಲಿ ಫೆಬ್ರುವರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಅದನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಿ ಆಗಸ್ಟ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. ಮಣಿಪುರದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದರೂ ಪ್ರಧಾನಿ ಅಲ್ಲಿಗೆ ಭೇಟಿ ನೀಡುತ್ತಿಲ್ಲ ಎಂದು ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸುತ್ತಿರುವ ಹೊತ್ತಿನಲ್ಲೇ ಈ ಭೇಟಿ ನಿಗದಿಯಾಗಿದೆ.

ಮೋದಿ ಚೀನಾ ಹಾಗೂ ಜಪಾನ್‌ ಪ್ರವಾಸಕ್ಕೆ ಶುಕ್ರವಾರ ತೆರಳಿದ್ದ ಸಂದರ್ಭದಲ್ಲಿ, ‘ಮೋದಿ ವಿದೇಶಕ್ಕೆ ಹೊರಟರೂ, 2023ರ ಮೇನಲ್ಲಿ ಆದ ಗಾಯಗಳನ್ನು ಗುಣಪಡಿಸಲು ಪ್ರಧಾನಿಗಾಗಿ ಮಣಿಪುರದ ಜನರು ಬಹುಕಾಲದಿಂದ ಕಾಯುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್‌ ಹೇಳಿದ್ದರು.

ರಾಜಧಾನಿ ಇಂಫಾಲ, ಚುರಾಚಾಂದಪುರಕ್ಕೆ ಭೇಟಿ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಹಿಂಸಾಚಾರದಲ್ಲಿ ಸ್ಥಳಾಂತರಗೊಂಡ ಜನರ ಭೇಟಿ ಸಾಧ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.