ADVERTISEMENT

ಸಾಲ ಮನ್ನಾ ಮಾಡುತ್ತೇವೆ ಎಂಬ ಕಾಂಗ್ರೆಸ್ ಭರವಸೆ ಬರೀ ಸುಳ್ಳು: ಮೋದಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 9:51 IST
Last Updated 24 ಫೆಬ್ರುವರಿ 2019, 9:51 IST
ಕೃಪೆ: ಎಎನ್ಐ
ಕೃಪೆ: ಎಎನ್ಐ   

ಗೋರಖ್‍ಪುರ್: ₹75,000 ಕೋಟಿ ಮೊತ್ತದ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ.

ಉತ್ತರ ಪ್ರದೇಶದ ಗೋರಖ್‍ಪುರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮೋದಿ ಇದು ದೇಶದಾದ್ಯಂತವಿರುವ 12 ಕೋಟಿ ರೈತರಿಗೆ ಸಹಾಯವಾಗಲಿದೆ. ಯೋಜನೆಯಡಿಯಲ್ಲಿ ಪ್ರತಿ ರೈತನಿಗೂ ವರ್ಷದಲ್ಲಿ 6ಸಾವಿರ ಸಿಗಲಿದೆ. ಮೂರು ಕಂತುಗಳಾಗಿ ಈ ಹಣ ಸಿಗಲಿದ್ದು, ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ.

ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್ ಘೋಷಣೆಯೊಂದಿಗೆ ಭಾಷಣ ಆರಂಭಿಸಿದ ಪ್ರಧಾನಿ, ಈ ಯೋಜನೆ ರೈತರ ಬದುಕಿಗೆ ನೆರವಾಗಲಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಸರ್ಕಾರದ ಯೋಜನೆಗಳು ಬರೀ ಕಡತಗಳಲ್ಲೇ ಉಳಿದಿದ್ದವು ಎಂದಿದ್ದಾರೆ.

ADVERTISEMENT

ರೈತರಿಗೆ ಖಾತೆಗೆ ನೇರ ಹಣ ವರ್ಗಾವಣೆ ಆಗುವ ಆ ಯೋಜನೆ ಬಗ್ಗೆ ವಿಪಕ್ಷಗಳು ಸುಳ್ಳು ಹಬ್ಬಿಸುತ್ತಿವೆ.ನಾವು ಸಂಸತ್ತಿನಲ್ಲಿ ಪಿಎಂ-ಕಿಸಾನ್ ಯೋಜನೆ ಘೋಷಿಸಿದಾಗ ವಿಪಕ್ಷದವರು ಸಪ್ಪೆ ಮುಖ ಮಾಡಿಕೊಂಡಿದ್ದರು.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಸಾಲ ಮನ್ನಾ ಮಾಡುತ್ತೇವೆಎಂದುಕಾಂಗ್ರೆಸ್ ಹೇಳುತ್ತಿರುವುದು ಬರೀ ಸುಳ್ಳು. ಹಿಂದಿನಸರ್ಕಾರ ಈ ಬಗ್ಗೆ ತುಂಬಾ ಮಾತನಾಡುತ್ತಿತ್ತು, ಆದರೆ ಅವರ ಯೋಜನೆಗಳು ಕಡತದಲ್ಲಿಯೇ ಬಾಕಿಯಾಗಿದ್ದು ರೈತರ ಅಭಿವೃದ್ಧಿಗೆ ಸಹಾಯ ಆಗಲಿಲ್ಲ.10 ವರ್ಷಗಳಲ್ಲಿ ₹52,000 ಕೋಟಿ ನೀಡಿದ್ದೇವೆ ಎಂದು ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಪಿಎಂ- ಕಿಸಾನ್ ಯೋಜನೆ ಮೂಲಕ ನಮ್ಮ ಸರ್ಕಾರ ₹75,000 ಕೋಟಿ ನೀಡುತ್ತಿದೆ ಎಂದಿದ್ದಾರೆ.

ಯೋಜನೆಗೆ ಚಾಲನೆ ನೀಡಿದ ನಂತರ ಮೋದಿ ರೈತರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ.ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ ಮೋದಿ ಭಾರತಕ್ಕೆ ಅನ್ನ ನೀಡುತ್ತಿರುವ, ಕಷ್ಟ ಪಟ್ಟುದುಡಿಯುತ್ತಿರುವ ಕೋಟಿ ರೈತರ ಕನಸುಗಳಿಗೆ ಈ ಯೋಜನೆ ಸಹಕಾರಿಯಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.