ADVERTISEMENT

‘ಚಂದ್ರಯಾನ–2’ಕ್ಕೆ ನಾಸಾ ಮೆಚ್ಚುಗೆ

ಪಿಟಿಐ
Published 8 ಸೆಪ್ಟೆಂಬರ್ 2019, 20:30 IST
Last Updated 8 ಸೆಪ್ಟೆಂಬರ್ 2019, 20:30 IST
   

ವಾಷಿಂಗ್ಟನ್‌ : ಚಂದ್ರಯಾನ–2 ಬಾಹ್ಯಾಕಾಶ ಯೋಜನೆಗೆ ನಾಸಾ ಅಪಾರ ಪ್ರಶಂಸೆ ವ್ಯಕ್ತಪಡಿಸಿದೆ.

‘ಭಾರತದ ಈ ಮಹತ್ವಾಕಾಂಕ್ಷಿ ಯೋಜನೆ ನಮ್ಮ ವಿಜ್ಞಾನಿಗಳಲ್ಲೂ ಹೊಸ ಸ್ಫೂರ್ತಿ ಮೂಡಿಸಿದೆ. ಸೌರಮಂಡಲ ಕುರಿತ ಸಂಶೋಧನೆಯಲ್ಲಿ ಇಸ್ರೊ ಜತೆ ಜಂಟಿಯಾಗಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದಾರೆ’ ಎಂದು ನಾಸಾ ತಿಳಿಸಿದೆ.

ಟ್ರಂಪ್‌ ಆಡಳಿತವು ಸಹ ಚಂದ್ರಯಾನ–2 ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ADVERTISEMENT

‘ಚಂದ್ರಯಾನ–2 ಯೋಜನೆಗಾಗಿ ಇಸ್ರೊಗೆ ಅಭಿನಂದಿಸುತ್ತೇವೆ. ಬಾಹ್ಯಾಕಾಶ ಕ್ಷೇತ್ರದ ಸಾಧನೆಯಲ್ಲಿ ಭಾರತದ ಮಹತ್ವದ ಸಾಧನೆಗೈದಿದೆ. ಭವಿಷ್ಯದಲ್ಲೂ ಭಾರತ ಇದೇ ರೀತಿ ಸಾಧನೆಯ ಹೆಜ್ಜೆಗಳನ್ನು ಇಡುವುದರಲ್ಲಿ ಸಂಶಯವಿಲ್ಲ’ ಎಂದು ದಕ್ಷಿಣ ಮತ್ತು ಕೇಂದ್ರೀಯ ಏಷ್ಯಾದ ಹಂಗಾಮಿ ಸಹಾಯಕ ಕಾರ್ಯದರ್ಶಿ ಅಲೈಸ್‌ ಜಿ. ವೆಲ್ಸ್‌ ಟ್ವೀಟ್‌ ಮಾಡಿದ್ದಾರೆ.

‘ಭಾರತ ಅತ್ಯಂತ ಕಠಿಣವಾದ ಸಾಧನೆಗೈಯಲು ಪ್ರಯತ್ನಿಸಿತ್ತು. ಯೋಜನೆ ಪ್ರಕಾರವೇ ಎಲ್ಲವೂ ನಡೆಯುತ್ತಿತ್ತು. ಈಗಿನ ಹಿನ್ನಡೆಯಿಂದ ಹತಾಶರಾಗಬೇಕಾಗಿಲ್ಲ. ಮುಂದೆ ಕೈಗೊಳ್ಳುವ ಯೋಜನೆಗಳಿಗೆ ಇದು ಪಾಠವಾಗಲಿದೆ’ ಎಂದು ನಾಸಾದ ಮಾಜಿ ಗಗನಯಾತ್ರಿ ಜೆರ್ರಿ ಲಿನೆಂಗರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.