ADVERTISEMENT

ಮಾಲ್ಡೀವ್ಸ್‌ನಿಂದ 698 ಭಾರತೀಯರ ಕರೆತಂದ ಐಎನ್‌ಎಸ್‌ ಜಲಾಶ್ವ

ಪಿಟಿಐ
Published 10 ಮೇ 2020, 19:45 IST
Last Updated 10 ಮೇ 2020, 19:45 IST
ಐಎನ್‌ಎಸ್‌ ಜಲಾಶ್ವ ನೌಕೆಯಲ್ಲಿ ಕೊಚ್ಚಿಗೆ ಬಂದಿಳಿದವರಲ್ಲಿ ಇದ್ದ ಗರ್ಭಿಣಿಯೊಬ್ಬರು ಆರೋಗ್ಯ ತಪಾಸಣೆಗೆ ಒಳಗಾದರು -ಪಿಟಿಐ ಚಿತ್ರ 
ಐಎನ್‌ಎಸ್‌ ಜಲಾಶ್ವ ನೌಕೆಯಲ್ಲಿ ಕೊಚ್ಚಿಗೆ ಬಂದಿಳಿದವರಲ್ಲಿ ಇದ್ದ ಗರ್ಭಿಣಿಯೊಬ್ಬರು ಆರೋಗ್ಯ ತಪಾಸಣೆಗೆ ಒಳಗಾದರು -ಪಿಟಿಐ ಚಿತ್ರ    

ಕೊಚ್ಚಿ: ಮಾಲ್ಡೀವ್ಸ್‌ನಲ್ಲಿದ್ದ 698 ಭಾರತೀಯರನ್ನು ಹೊತ್ತ ನೌಕಾಪಡೆಯ ಐಎನ್‌ಎಸ್‌ ಜಲಾಶ್ವ ಭಾನುವಾರ ಬೆಳಗ್ಗೆ 9.30ಕ್ಕೆ ಕೊಚ್ಚಿಯ ಬಂದರಿಗೆ ಬಂದಿಳಿದಿದೆ. ಈ ಮೂಲಕ ಲಾಕ್‌ಡೌನ್‌ ವೇಳೆ ವಿದೇಶದಲ್ಲಿದ್ದ ಭಾರತೀಯರನ್ನು ವಾಪಸ್‌ ಕರೆತರುವ ನೌಕಾಪಡೆಯ ಮೊದಲ ಬೃಹತ್‌ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಮಾಲೆಯಲ್ಲಿ ಶುಕ್ರವಾರ ರಾತ್ರಿ ನೌಕೆ ಪ್ರಯಾಣ ಆರಂಭಿಸಿತ್ತು. ನೌಕೆಯಲ್ಲಿದ್ದವರಲ್ಲಿ ಕರ್ನಾಟಕದ 8 ಮಂದಿ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದವರು ಇದ್ದಾರೆ. ಬಹುತೇಕರು ಕೇರಳ, ತಮಿಳುನಾಡಿನವರಾಗಿದ್ದಾರೆ.

‘ಪ್ರಯಾಣಿಕರಿಗೆ ತಮ್ಮ ಮೊಬೈಲ್‌ಗಳಲ್ಲಿ ಆರೋಗ್ಯಸೇತು ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಸೂಚಿಸಲಾಗಿದೆ.‌ಬಂದರು ಟರ್ಮಿನಲ್‌ನಲ್ಲಿ ಉಚಿತ ವೈ-ಫೈ ವ್ಯವಸ್ಥೆ ಮಾಡಲಾಗಿದೆ. ಲಗೇಜ್‌ಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಪ್ರಯಾಣಿಕರನ್ನು ಕ್ವಾರಂಟೈನ್‌ ಕೇಂದ್ರಗಳು ಅಥವಾ ಆಸ್ಪತ್ರೆಗಳಿಗೆ ಕಳುಹಿಸಲು ಕೇರಳ ಸರ್ಕಾರ ಆಂಬುಲೆನ್ಸ್‌, ಬಸ್‌ ಹಾಗೂ ಟ್ಯಾಕ್ಸಿ ವ್ಯವಸ್ಥೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.