ADVERTISEMENT

ಅಂಡಮಾನ್‌ ಸಮುದ್ರದಲ್ಲಿ ಭಾರತ–ಥಾಯ್ಲೆಂಡ್ ನೌಕಾಪಡೆಯ ಜಂಟಿ ಕವಾಯತು

ಮೂರು ದಿನಗಳ ಕವಾಯತ್‌ನಲ್ಲಿ ಎರಡೂ ದೇಶಗಳ ಯುದ್ಧನೌಕೆ ಮತ್ತು ವಿಮಾನಗಳು ಭಾಗಿ

ಪಿಟಿಐ
Published 9 ಜೂನ್ 2021, 10:07 IST
Last Updated 9 ಜೂನ್ 2021, 10:07 IST
ಅಂಡಮಾನ್‌ ಸಮುದ್ರದಲ್ಲಿ ಬುಧವಾರದಿಂದ ಅರಂಭವಾದ ಮೂರುದಿನಗಳ ‘ಇಂಡೋ–ಥಾಯ್‌ ಗಸ್ತು ತಿರುಗಾಟದ‘ 31ನೇ ಆವೃತ್ತಿಯಲ್ಲಿ ಪಾಲ್ಗೊಂಡಿರುವ ಭಾರತೀಯ ಯುದ್ಧ ನೌಕೆ ಐಎನ್‌ಎಸ್ ಸರಯು ಮತ್ತು ಹಿಸ್ ಮೆಜೆಸ್ಟಿಯ ಥಾಯ್ಲೆಂಡ್ ಹಡಗು ಎಚ್‌ಟಿಎಂಎಸ್ ಕ್ರಾಬಿ ಮತ್ತು ಎರಡೂ ನೌಕಾಪಡೆಯ ಡಾರ್ನಿಯರ್ ಗಸ್ತು ಯುದ್ಧ ವಿಮಾನಗಳು.

ನವದೆಹಲಿ: ಹಿಂದೂ ಮಹಾಸಾಗರದಲ್ಲಿ ಚೀನಾ ನೌಕಾಪಡೆಗಳ ಉಪಸ್ಥಿತಿ ಹೆಚ್ಚುತ್ತಿರುವ ನಡುವೆಯೇ, ಭಾರತ ಮತ್ತು ಥಾಯ್ಲೆಂಡ್‌ನ ನೌಕಾಪಡೆಗಳು ಬುಧವಾರದಿಂದ ಜಂಟಿಯಾಗಿ ಮೂರು ದಿನಗಳ ಕಾಲ ಅಂಡಮಾನ್‌ ಸಮುದ್ರದಲ್ಲಿ ಗಸ್ತು ತಿರುಗಾಟ ನಡೆಸಿದವು.

ಅಂತರರಾಷ್ಟ್ರೀಯ ಕಡಲ ಗಡಿರೇಖೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಥಾಯ್ಲೆಂಡ್‌ ಜಂಟಿ ನೌಕಾ ಕವಾಯತಿನ 31ನೇ ಆವೃತ್ತಿಯ ಭಾಗವಾಗಿ ಎರಡು ದೇಶಗಳ ನೌಕಾಪಡೆಗಳ ಈ ಗಸ್ತು ತಿರುಗಾಟ ನಡೆದಿದೆ.

ಇದರಲ್ಲಿ, ಭಾರತದ ಯುದ್ಧನೌಕೆ ಐಎನ್‌ಎಸ್‌ ಸರಯೂ, ಥಾಯ್ಲೆಂಡ್‌ನ ಕ್ರಾಬಿ ಹಡಗು ಹಾಗೂ ಎರಡೂ ದೇಶಗಳ ನೌಕಾಪಡೆಯ ಯುದ್ಧ ವಿಮಾನಗಳು ಪಾಲ್ಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜಾಗತಿಕ ವ್ಯಾಪಾರಕ್ಕಾಗಿ ಹಿಂದೂ ಮಹಾಸಾಗರದ ಪ್ರಮುಖ ಭಾಗವನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಹಿನ್ನೆಲೆಯಲ್ಲಿ ಎರಡು ನೌಕಾಪಡೆಗಳು 2005ರಿಂದ ಎರಡು ವರ್ಷಕ್ಕೊಮ್ಮೆ ಅಂತರರಾಷ್ಟ್ರೀಯ ಕಡಲ ಗಡಿರೇಖೆಯಲ್ಲಿ (ಐಎಂಬಿಎಲ್) ಜಂಟಿ ನೌಕಾ ಕವಾಯತು ನಡೆಸುತ್ತಿವೆ‘ ಎಂದು ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಾಧ್ವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.