ADVERTISEMENT

ಜಲಾಂತರ್ಗಾಮಿ ಐಎನ್‌ಎಸ್‌ ವೇಲಾ ನೌಕಾಪಡೆಗೆ ಸೇರ್ಪಡೆ

ಪಿಟಿಐ
Published 25 ನವೆಂಬರ್ 2021, 5:48 IST
Last Updated 25 ನವೆಂಬರ್ 2021, 5:48 IST
ಮುಂಬೈನ ನೌಕಾನೆಲೆಯಲ್ಲಿ ಜಲಾಂತರ್ಗಾಮಿ 'ಐಎನ್‌ಎಸ್ ವೇಲಾ'
ಮುಂಬೈನ ನೌಕಾನೆಲೆಯಲ್ಲಿ ಜಲಾಂತರ್ಗಾಮಿ 'ಐಎನ್‌ಎಸ್ ವೇಲಾ'   

ಮುಂಬೈ: ಭಾರತೀಯ ನೌಕಾಪಡೆಯು ಗುರುವಾರ ಮುಂಬೈನ ನೌಕಾನೆಲೆಯಲ್ಲಿ ಜಲಾಂತರ್ಗಾಮಿ 'ಐಎನ್‌ಎಸ್ ವೇಲಾ'ವನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡಿದೆ. ‘ವೇಲಾ’ ಆಗಮನದೊಂದಿಗೆ ದೇಶದ ನೌಕಾ ಶಕ್ತಿಗೆ ಮತ್ತಷ್ಟು ಬಲ ಬಂದಿದೆ.

‘ಕಲ್ವರಿ-ಕ್ಲಾಸ್’ ಜಲಾಂತರ್ಗಾಮಿ ಯೋಜನೆ-75ರ ಅಡಿಯಲ್ಲಿ ಭಾರತೀಯ ನೌಕಾಪಡೆಯು ಸೇರ್ಪಡೆ ಮಾಡಿಕೊಳ್ಳಲಿರುವ ಆರು ಜಲಾಂತರ್ಗಾಮಿ ನೌಕೆಗಳ ಪೈಕಿ ಇದು ನಾಲ್ಕನೆಯದ್ದು.

ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರ ಸಮ್ಮುಖದಲ್ಲಿ ಜಲಾಂತರ್ಗಾಮಿ ನೌಕೆಗೆ ಚಾಲನೆ ನೀಡಲಾಯಿತು. ಒಂದೇ ವಾರದ ಅಂತರದಲ್ಲಿ ಭಾರತೀಯ ನೌಕಾಪಡೆಗೆ ಆಗುತ್ತಿರುವ ಎರಡನೇ ಪ್ರಮುಖ ಸೇರ್ಪಡೆ ಇದಾಗಿದೆ.

ADVERTISEMENT

ನವೆಂಬರ್ 21 ರಂದು ನೌಕಾಪಡೆಯು ಯುದ್ಧನೌಕೆ ‘ಐಎನ್‌ಎಸ್‌ ವಿಶಾಖಪಟ್ಟಣ’ವನ್ನು ಸೇವೆಗೆ ಸೇರ್ಪಡೆ ಮಾಡಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.