ADVERTISEMENT

Navy Day: ನೌಕಪಡೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2025, 7:29 IST
Last Updated 4 ಡಿಸೆಂಬರ್ 2025, 7:29 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು</p></div>

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು

   

ನವದೆಹಲಿ: ನೌಕಾಪಡೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ನೌಕಾಪಡೆಯ ಸಿಬ್ಬಂದಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಶುಭಾಶಯ ತಿಳಿಸಿದ್ದಾರೆ.

ಭಾರತೀಯ ನೌಕಾಪಡೆಯ ಎಲ್ಲ ಸಿಬ್ಬಂದಿಗೆ ನೌಕಾಪಡೆಯ ದಿನದ ಶುಭಾಶಯಗಳು. ನಮ್ಮ ನೌಕಾಪಡೆ ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪಕ್ಕೆ ಸಮಾನಾರ್ಥಕವಾಗಿದೆ. ಅವರು ನಮ್ಮ ಕಡಲ ತೀರಗಳನ್ನು ರಕ್ಷಿಸುತ್ತಾರೆ. ಕಡಲ ಹಿತಾಸಕ್ತಿಗಳನ್ನು ಎತ್ತಿಹಿಡಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ನಮ್ಮ ನೌಕಾಪಡೆ ಸ್ವಾವಲಂಬನೆ ಮತ್ತು ಆಧುನೀಕರಣದ ಮೇಲೆ ಕೇಂದ್ರೀಕರಿಸಿದೆ. ಇದು ನಮ್ಮ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

ಈ ವರ್ಷದ ದೀಪಾವಳಿಯನ್ನು ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿರುವ ನೌಕಾ ಸಿಬ್ಬಂದಿಯೊಂದಿಗೆ ಕಳೆದದ್ದನ್ನು ಎಂದಿಗೂ ಮರೆಯಲಾರೆ ಎಂದು ಮೋದಿ ಹೇಳಿದ್ದಾರೆ.

ದೇಶದ ಕಡಲ ಗಡಿಗಳು ಮತ್ತು ಆರ್ಥಿಕ ಜೀವನಾಡಿಗಳನ್ನು ಭದ್ರಪಡಿಸುವಲ್ಲಿ ನೌಕಾಪಡೆಯ ನಿರ್ಣಾಯಕ ಪಾತ್ರವನ್ನು ಪ್ರಧಾನಮಂತ್ರಿಯವರು ವಿಡಿಯೊ ಸಂದೇಶದಲ್ಲಿ ಒತ್ತಿ ಹೇಳಿದ್ದಾರೆ.

‘ಸಾಗರದಲ್ಲಿ, ನಮ್ಮ ನೌಕಾಪಡೆಯು ದೇಶದ ಕಡಲ ಗಡಿಗಳು ಮತ್ತು ವಾಣಿಜ್ಯ ಹಿತಾಸಕ್ತಿಗಳನ್ನು ರಕ್ಷಿಸಲು ದೃಢನಿಶ್ಚಯವನ್ನು ಹೊಂದಿದೆ. ಅದು ಕಡಲಾಚೆಯ ಕಣ್ಗಾವಲು ಪಡೆ , ಜಲಾಂತರ್ಗಾಮಿ ನೌಕೆಗಳು ಅಥವಾ ವಿಮಾನ ವಾಹಕಗಳೇ ಆಗಿರಲಿ. ಇಂದು, ಭಾರತೀಯ ನೌಕಾಪಡೆಯ ಬಲವು ಭಾರಿ ಪ್ರಮಾನದಲ್ಲಿ ಹೆಚ್ಚುತ್ತಿದೆ’ಎಂದು ಅವರು ಹೇಳಿದ್ದಾರೆ.

ಮುರ್ಮು ಶ್ಲಾಘನೆ

ಸಮುದ್ರ ಗಡಿಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಧೈರ್ಯ, ಜಾಗರೂಕತೆ ಮತ್ತು ಅಚಲ ಬದ್ಧತೆಯಿಂದ ಕಾಪಾಡುವ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ರಾಷ್ಟ್ರವು ನಮಿಸುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ವ್ಯಾಪಾರ ಮಾರ್ಗಗಳನ್ನು ಸುರಕ್ಷಿತಗೊಳಿಸುವುದು ಮತ್ತು ನೀಲಿ ಆರ್ಥಿಕತೆಯನ್ನು ಬಲಪಡಿಸುವುದರಿಂದ ಹಿಡಿದು ಮಾನವೀಯ ಕಾರ್ಯಾಚರಣೆಗಳನ್ನು ಮುನ್ನಡೆಸುವವರೆಗೆ, ಭಾರತೀಯ ನೌಕಾಪಡೆಯು ಶಿಸ್ತು, ಸಹಾನುಭೂತಿ ಮತ್ತು ಜವಾಬ್ದಾರಿಯನ್ನು ಸಾಕಾರಗೊಳಿಸುತ್ತದೆ ಎಂದು ಅವರು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ನೌಕಾಪಡೆಯ ದಿನದಂದು ಭಾರತೀಯ ನೌಕಾಪಡೆಯ ಸಿಬ್ಬಂದಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಹೃತ್ಪೂರ್ವಕ ಶುಭಾಶಯಗಳು! ನಮ್ಮ ಕಡಲ ಗಡಿಗಳನ್ನು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಧೈರ್ಯ, ಜಾಗರೂಕತೆ ಮತ್ತು ಅಚಲ ಬದ್ಧತೆಯಿಂದ ಕಾಪಾಡುವ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ರಾಷ್ಟ್ರವು ನಮಿಸುತ್ತದೆ’ಎಂದು ಮುರ್ಮು ಹೇಳಿದರು.

ದೇಶದ ಭೂಸೇನೆ, ವಾಯುಸೇನೆ ರೀತಿಯೇ ನೌಕಾಪಡೆಯು ದೇಶದ ಕಡಲ ಗಡಿ ರಕ್ಷಣೆ, ಶತ್ರುಗಳನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮುದ್ರ ಮಾರ್ಗದಲ್ಲಿ ಕಳ್ಳರಿಗೆ ಕಡಿವಾಣ, ಉಗ್ರರ ಉಪಟಳವನ್ನು ನಿಗ್ರಹಿಸುವ ಮೂಲಕ ದೆಶವನ್ನು ರಕ್ಷಿಸುತ್ತಿದೆ.

ನೌಕಾಪಡೆಯ ಸಾಧನೆಯನ್ನು ಗೌರವಿಸಲು ಪ್ರತಿ ವರ್ಷ ಡಿಸೆಂಬರ್ 4ರಂದು ಈ ದಿನವನ್ನು ಆಚರಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ 1971ರ ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಅದರ ಪಾತ್ರ ಸ್ಮರಣೆಗೆ ಈ ದಿನವನ್ನು ನಿಗದಿಪಡಿಸಲಾಗಿದೆ. 1971ರ ಡಿಸೆಂಬರ್ 3ರಂದು ಪಾಕಿಸ್ತಾನಿ ವಾಯುಪಡೆ ಭಾರತೀಯ ವಾಯುಪಡೆ ಮೇಲೆ ದಾಳಿ ನಡೆಸಿದ್ದಾಗ, ಪಾಕ್‌ನ 4 ಹಡಗುಗಗಳನ್ನು ಮುಳುಗಿಸಿದ್ದ ನೌಕಾಪಡೆ ಆಪರೇಷನ್ ಟ್ರೈಡೆಂಟ್ ಹೆಸರಿನ ಕಾರ್ಯಾಚರಣೆ ಮೂಲಕ ತಿರುಗೇಟು ನೀಡಿತ್ತು. ಈ ಶೌರ್ಯ ಪ್ರದರ್ಶನದ ಸ್ಮರಣೆಯನ್ನು ಡಿಸೆಂಬರ್ 4ರಂದು ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.