ADVERTISEMENT

ಛತ್ತೀಸಗಢ:ಕಬ್ಬಿಣದ ಅದಿರು ಸಾಗಿಸುತ್ತಿದ್ದ 4ಟ್ರಕ್‌ಗಳಿಗೆ ಬೆಂಕಿ ಹಚ್ಚಿದ ನಕ್ಸಲರು

ಪಿಟಿಐ
Published 31 ಮಾರ್ಚ್ 2024, 4:38 IST
Last Updated 31 ಮಾರ್ಚ್ 2024, 4:38 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನಾರಾಯಣಪುರ: ಛತ್ತೀಸಗಢದ ನಾರಾಯಣಪುರ ಜಿಲ್ಲೆಯ ಗಣಿಯಿಂದ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ನಾಲ್ಕು ಟ್ರಕ್‌ಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದಾರೆ.

ಶನಿವಾರ ರಾತ್ರಿ ಘಟನೆ ನಡೆದಿದ್ದು, ಯಾವೊಬ್ಬ ವ್ಯಕ್ತಿಯೂ ಗಾಯಗೊಂಡಿಲ್ಲ. ಖಾಸಗಿ ಕಂಪನಿಯೊಂದಕ್ಕೆ ಮಂಜೂರಾದ ಆಮದಾಯಿ ಘಾಟಿ ಗಣಿಯಿಂದ ಕಬ್ಬಿಣದ ಅದಿರು ಸಾಗಿಸುತ್ತಿದ್ದ ನಾಲ್ಕು ಟ್ರಕ್‌ಗಳನ್ನು ಓರ್ಚಾ-ನಾರಾಯಣಪುರ ರಸ್ತೆಯ ಛೋಟೆಡೊಂಗರ್ ಪೊಲೀಸ್ ಠಾಣೆ ಬಳಿ ನಕ್ಸಲೀಯರು ತಡೆದಿದ್ದಾರೆ. ಚಾಲಕರ ಬಳಿ ಟ್ರಕ್‌ನಿಂದ ಕೆಳಕ್ಕೆ ಇಳಿಯುವಂತೆ ಹೇಳಿ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಷ್ಟರಲ್ಲಿ ನಾಲ್ಕು ಟ್ರಕ್‌ಗಳು ಸುಟ್ಟು ಭಸ್ಮವಾಗಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಆಮದಾಯಿ ಘಾಟಿ ಗಣಿ ಯೋಜನೆಗೆ ನಕ್ಸಲೀಯರು ಬಹಳ ದಿನಗಳಿಂದ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಹಿಂದೆಯೂ ಕಾಮಗಾರಿಯಲ್ಲಿ ತೊಡಗಿದ್ದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.