ADVERTISEMENT

ಡ್ರಗ್ಸ್‌ ಪ್ರಕರಣ: ದಾವೂದ್‌ ಸಹಚರನ ಬಂಧನ

ಪಿಟಿಐ
Published 20 ಜನವರಿ 2021, 16:41 IST
Last Updated 20 ಜನವರಿ 2021, 16:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ ಪರ್ವೇಜ್‌ ಖಾನ್‌ ಅಲಿಯಾಸ್‌ ಚಿಂಕು ಪಠಾಣ್‌ ಎಂಬಾತನನ್ನು ಮಾದಕವಸ್ತುಗಳ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಅಧಿಕಾರಿಗಳು ನವಿಮುಂಬೈನಲ್ಲಿ ಬುಧವಾರ ಬಂಧಿಸಿದ್ದಾರೆ.

‘ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ನವಿಮುಂಬೈನ ಪ್ರದೇಶವೊಂದರಲ್ಲಿ ಅವಿತಿದ್ದ ಪರ್ವೇಜ್‌ ಖಾನ್‌ನನ್ನು ಬಂಧಿಸಿತು. ಈ ವೇಳೆ ಕೆಲವು ಡ್ರಗ್ಸ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ’ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಮೆಫೆಡ್ರೋನ್‌ (ಎಂಡಿ) ಎಂಬ ಮಾದಕವಸ್ತುವಿನ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಕೆಲವು ಪೆಡ್ಲರ್‌ಗಳೊಂದಿಗೆ ಸಹ ಪರ್ವೇಜ್‌ ಸಂಪರ್ಕ ಹೊಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.