ADVERTISEMENT

ಅಧಿಕಾರಕ್ಕಾಗಿ ಎನ್‌ಡಿಎ ಏನು ಬೇಕಾದ್ರೂ ಮಾಡುತ್ತೆ: ಲವ್ ಸಿನ್ಹಾ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 8:21 IST
Last Updated 10 ನವೆಂಬರ್ 2020, 8:21 IST
ತಾಯಿಯೊಂದಿಗೆ ಲವ್‌ ಸಿನ್ಹಾ
ತಾಯಿಯೊಂದಿಗೆ ಲವ್‌ ಸಿನ್ಹಾ   

ಪಟ್ನಾ: ಸ್ವಂತ ಸಾಮರ್ಥ್ಯದಿಂದ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ, ಅಧಿಕಾರಕ್ಕೆ ಬರಲು ಎನ್‌ಡಿಎ ಏನು ಬೇಕಾದರೂ ಮಾಡುತ್ತೆಎಂದು ಕಾಂಗ್ರೆಸ್ ನಾಯಕ ಲವ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.

'ಸರ್ಕಾರ ರಚಿಸಲು ಏನು ಮಾಡಿದರೂ ಸರಿ ಎಂಬ ಹಳೆಯ ಕಾರ್ಯಕರ್ತವನ್ನು ಬಿಜೆಪಿ ಕರಗತ ಮಾಡಿಕೊಂಡಿದೆ' ಎಂದು ಅವರು ಟೀಕಿಸಿದ್ದಾರೆ.

'ಈಗ ನಾವು ಅತ್ಯಂತ ಎಚ್ಚರದಿಂದ ಎಲ್ಲವನ್ನೂ ಗಮನಿಸುತ್ತಿರಬೇಕು' ಎಂಬ ತಮ್ಮ ತಂದೆ ಶತ್ರುಘ್ನ ಸಿನ್ಹಾ ಅವರ ಟ್ವೀಟ್‌ ಅನ್ನು ಲವ್ ಸಿನ್ಹಾ ರಿಟ್ವೀಟ್ ಮಾಡಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.