ಉಪೇಂದ್ರ ಕುಶ್ವಾಹ (ಪಿಟಿಐ ಸಂಗ್ರಹ ಚಿತ್ರ)
ಪಟ್ನಾ: ಮುಂಬರುವ ವಿಧಾನಸಭಾ ಚುನಾಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಗೆಲುವು ಸಾಧಿಸಲು ರಾಜ್ಯದಲ್ಲಿ ಉತ್ತಮ ಅವಕಾಶವಿದೆ ಎಂದು ಆರ್‌ಎಲ್‌ಎಂ ಪಕ್ಷದ ನಾಯಕ ಉಪೇಂದ್ರ ಕುಶ್ವಾಹ ಶುಕ್ರವಾರ ಹೇಳಿದ್ದಾರೆ.
ಜಗದೇವ್ ಪ್ರಸಾದ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಗದೇವ್ ಪ್ರಸಾದ್ ಬಿಹಾರದ ಒಬಿಸಿ ನಾಯಕರಾಗಿದ್ದು ಅವರು ‘ಬಿಹಾರದ ಲೆನಿನ್‘ ಎಂದರು.
ನಾವು ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ, ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ನಮ್ಮದು ಎಂದು ಕುಶ್ವಾಹ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.