ನವದೆಹಲಿ: ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ತಂಡಗಳು ನಿರತವಾಗಿವೆ. ಸದ್ಯ ಈ ತಂಡಗಳ ಸಂಖ್ಯೆಯನ್ನು 18 ರಿಂದ 26ಕ್ಕೆ ಹೆಚ್ಚಿಸಲಾಗಿದೆ.
‘ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂಬೈ, ರತ್ನಾಗಿರಿ, ಠಾಣೆ, ಪಾಲ್ಘರ್, ರಾಯಗಡ, ಸಾತಾರ, ಸಾಂಗ್ಲಿ, ಸಿಂಧುದುರ್ಗ, ಕೊಲ್ಹಾಪುರ ಮತ್ತು ನಾಗಪುರದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗುವುದು’ ಎಂದು ಎನ್‌ಡಿಆರ್‌ಎಫ್‌ನ ವಕ್ತಾರರು ತಿಳಿಸಿದರು.
‘ಒಡಿಶಾದಲ್ಲಿರುವ ಎನ್‌ಡಿಆರ್‌ಎಫ್‌ನ ಶಿಬಿರದಿಂದ 8 ಹೊಸ ತಂಡಗಳನ್ನು ಭಾರತೀಯ ವಾಯುಪಡೆ ಏರ್‌ಲಿಫ್ಟ್ ಮಾಡಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.