ADVERTISEMENT

ಈಶಾನ್ಯದ ಮೂರು ರಾಜ್ಯಗಳಲ್ಲಿ ತ್ವರಿತಗತಿಯ ಪ್ರಗತಿ– ಪ್ರಧಾನಿ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 13:50 IST
Last Updated 21 ಜನವರಿ 2022, 13:50 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಅಗರ್ತಲಾ/ಶಿಲ್ಲಾಂಗ್‌/ನವದೆಹಲಿ: ಈಶಾನ್ಯದ ಮೂರು ರಾಜ್ಯಗಳ ಸಂಸ್ಥಾಪನಾ ದಿನದ ನಿಮಿತ್ತ ಶುಭಾಶಯ ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸಂಪರ್ಕ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ಈ ರಾಜ್ಯಗಳು ಈಗ ತ್ವರಿತಗತಿಯಲ್ಲಿ ಪ್ರಗತಿ ಕಾಣುತ್ತಿವೆ ಎಂದು ಹೇಳಿದ್ದಾರೆ.

ಈಶಾನ್ಯದ ರಾಜ್ಯಗಳಾದ ತ್ರಿಪುರಾ, ಮಣಿಪುರ, ಮೇಘಾಲಯ 50ನೇ ಸ್ಥಾಪನಾ ದಿನದ ಸಂಭ್ರಮದಲ್ಲಿವೆ. ಪ್ರಧಾನಿ ಈ ಸಂಬಂಧ ಪ್ರತ್ಯೇಕವಾಗಿ ಸಂದೇಶ ನೀಡಿದ್ದಾರೆ. ಈ ರಾಜ್ಯಗಳನ್ನು ‘ಅವಕಾಶಗಳ ತವರು, ವಾಣಿಜ್ಯ ವಹಿವಾಟಿನ ಕೇಂದ್ರ’ ಎಂದು ಬಣ್ಣಿಸಿರುವ ಮೋದಿ, ಸಂಪರ್ಕ ಮತ್ತು ಅಭಿವೃದ್ಧಿ ಈ ರಾಜ್ಯಗಳ ಪ್ರಮುಖ ಲಕ್ಷಣವಾಗಿದೆ ಎಂದಿದ್ದಾರೆ.

ಡಬಲ್‌ ಎಂಜಿನ್‌ ಸರ್ಕಾರ (ಕೇಂದ್ರ, ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತ) ಈ ರಾಜ್ಯಗಳಲ್ಲಿ ಅಭಿವೃದ್ಧಿಗೆ ವೇಗ ನೀಡಿದೆ. ಅಭಿವೃದ್ಧಿಯ ಹಾದಿಯಲ್ಲಿದ್ದ ತೊಡಕುಗಳನ್ನು ನಿವಾರಿಸಲಾಗಿದೆ. ಎಲ್ಲ ಮೂರು ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಅಥವಾ ಬಿಜೆಪಿ ಬೆಂಬಲಿತ ಸರ್ಕಾರಗಳೇ ಇವೆ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ಸ್ವಾತಂತ್ರ್ಯಾನಂತರ ಮಣಿಪುರ ಮತ್ತು ತ್ರಿಪುರ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಂಡರೆ, ಅಸ್ಸಾಂನಿಂದ 1969ರಲ್ಲಿ ವಿಭಜನೆಗೊಂಡು ಎರಡು ಜಿಲ್ಲೆಗಳಿಂದ ಮೇಘಾಲಯ ಅಸ್ತಿತ್ವಕ್ಕೆ ಬಂದಿದೆ. ಮೂರು ರಾಜ್ಯಗಳಿಗೂ ಈಶಾನ್ಯ ಪ್ರದೇಶಗಳ (ಪುನರ್ರಚನೆ) ಕಾಯ್ದೆ 1971ರ ಅನ್ವಯ ಪೂರ್ಣವಾಗಿ ರಾಜ್ಯ ಸ್ಥಾನಮಾನ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.