ನವದೆಹಲಿ: ಭೂತಾನ್ ಗಡಿಯಲ್ಲಿರುವ ಡೋಕ್ಲಾಮ್ ಪ್ರಸ್ಥಭೂಮಿಯ ಪೂರ್ವಭಾಗದಲ್ಲಿ ಚೀನಾ, ಗ್ರಾಮವೊಂದನ್ನು ನಿರ್ಮಿಸಿರುವುದು ಉಪಗ್ರಹ ಸೆರೆಹಿಡಿದಿರುವ ಚಿತ್ರಗಳಿಂದ ತಿಳಿದುಬಂದಿದೆ.
‘ಗ್ರಾಮದ ಪ್ರತಿಯೊಂದು ಮನೆ ಮುಂದೆ ಕಾರು ನಿಲ್ಲಿಸಿರುವುದು ಚಿತ್ರಗಳಲ್ಲಿ ಕಾಣಿಸುತ್ತದೆ’ ಎಂದು ಈ ಚಿತ್ರಗಳನ್ನು ಬಿಡುಗಡೆ ಮಾಡಿರುವ ಎನ್‌ಡಿಟಿವಿ ಹೇಳಿದೆ.
ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಎಂಎಎಕ್ಸ್‌ಎಆರ್’ ಎಂಬ ಕಂಪನಿ ಈ ಚಿತ್ರಗಳನ್ನು ಸೆರೆ ಹಿಡಿದಿದೆ.
ಈ ಹಿಂದೆ ಈ ಪ್ರದೇಶದಲ್ಲಿ ರಸ್ತೆನಿರ್ಮಿಸಲುಮುಂದಾಗಿದ್ದಚೀನಾಕ್ಕೆ ಭಾರತ ಪ್ರತಿರೋಧವೊಡ್ಡಿತ್ತು.ಹೀಗಾಗಿಉಭಯದೇಶಗಳ ಸೇನೆಗಳ ನಡುವೆ 73 ದಿನಗಳ ಕಾಲ ಸಂಘರ್ಷವೇರ್ಪಟ್ಟಿತ್ತು. ನಂತರ, ಈ ಪ್ರದೇಶ ತನಗೆ ಸೇರಿದ್ದು ಎಂದು ಭೂತಾನ್ ಹೇಳಿತ್ತು. ಭದ್ರತೆಗೆ ಸಂಬಂಧಿಸಿ, ಈ ಪ್ರದೇಶ ಭಾರತಕ್ಕೆ ಮುಖ್ಯವಾದದ್ದು ಎಂದೇ ಪರಿಗಣಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.