ADVERTISEMENT

ಎಸಿ ಕೋಚ್‌ಗಳಲ್ಲಿ ತಾಜಾ ಗಾಳಿ ವ್ಯವಸ್ಥೆ: ರೈಲ್ವೆ

ಆಪರೇಷನ್‌ ಥಿಯೇಟರ್‌ಗಳಲ್ಲಿರುವ ತಂತ್ರಜ್ಞಾನ ಬಳಕೆ

ಪಿಟಿಐ
Published 28 ಜೂನ್ 2020, 14:08 IST
Last Updated 28 ಜೂನ್ 2020, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈಲುಗಳಲ್ಲಿನ ಎಸಿ ಕೋಚ್‌ಗಳಲ್ಲಿ ತಾಜಾ ಗಾಳಿಯನ್ನು ಪಂಪ್‌ ಮಾಡುವಂಥ ವ್ಯವಸ್ಥೆಯನ್ನು ಅಳವಡಿಸಲು ರೈಲ್ವೆ ನಿರ್ಧರಿಸಿದೆ.

ಇಂತಹ ವ್ಯವಸ್ಥೆಯನ್ನು ಆಸ್ಪತ್ರೆಗಳ ಆಪರೇಷನ್‌ ಥಿಯೇಟರ್‌ಗಳಲ್ಲಿ ಬಳಸಲಾಗುತ್ತಿದೆ. ಎಸಿ ಕೋಚ್‌ಗಳಲ್ಲಿ ಈಗ ಗಾಳಿ ಸುತ್ತುವ ವ್ಯವಸ್ಥೆ ಇದೆ. ಇದರಿಂದ ಸೋಂಕು ಪ್ರಸರಣವಾಗುವ ಸಾಧ್ಯತೆ ಹೆಚ್ಚು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

‘ಪ್ರಾಯೋಗಿಕವಾಗಿ 15 ರಾಜಧಾನಿ ಎಕ್ಸ್‌ಪ್ರೆಸ್‌ಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಈಗ ಎಲ್ಲ ರೈಲುಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ‘ ಎಂದೂ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.