ADVERTISEMENT

ಅಲಿಗಡ: ಹೊಸ ವಿಶ್ವವಿದ್ಯಾಲಯಕ್ಕೆ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಹೆಸರು

ಉತ್ತರಪ್ರದೇಶ: ಸ್ಥಳೀಯ ಬಿಜೆಪಿ ಘಟಕದ 7 ವರ್ಷದ ಹೋರಾಟ

ಪಿಟಿಐ
Published 13 ಸೆಪ್ಟೆಂಬರ್ 2021, 14:47 IST
Last Updated 13 ಸೆಪ್ಟೆಂಬರ್ 2021, 14:47 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಅಲಿಗಡ: ಇಲ್ಲಿನ ಲೋಧಾ ಪಟ್ಟಣದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ ರಾಜಾ ಮಹೇಂದ್ರ ಪ್ರತಾಪ ಸಿಂಗ್ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕಲಿದ್ದಾರೆ.

ಅಲಿಗಡದ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ (ಎಎಂಯು) ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ ಸಿಂಗ್ ಅವರು ಭೂಮಿ ನೀಡಿದ್ದರಿಂದ ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನೇ ಇಡಬೇಕೆಂದು ಸ್ಥಳೀಯ ಬಿಜೆಪಿ ಘಟಕವು ಏಳು ವರ್ಷಗಳಿಂದ ಹೋರಾಟ ನಡೆಸುತ್ತಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.

ಆದರೆ, ಇದೀಗ ಅಲಿಗಡದಿಂದ 40 ಕಿ.ಮೀ. ದೂರದ ಲೋಧಾದಲ್ಲಿ ರಾಜಾ ಮಹೇಂದ್ರ ಪ್ರತಾಪ ಸಿಂಗ್ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿದೆ. ಬಿಜೆಪಿಯ ಏಳು ವರ್ಷಗಳ ಬೇಡಿಕೆ ಈಗ ಈಡೇರಿರುವುದು ಪಕ್ಷದ ಸ್ಥಳೀಯ ನಾಯಕರಿಗೆ ಸಂತಸ ತಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.