ಕಟ್ಟಡದ ಬಾಲ್ಕನಿಯಿಂದ ಜಿಗಿಯಲು ಯತ್ನಿಸಿದ್ದ ಜನರು
ಅಹಮದಾಬಾದ್: ಏರ್ ಇಂಡಿಯಾ ವಿಮಾನವು ಅಹಮದಾಬಾದ್‌ನ ಬಿ.ಜೆ. ವೈದ್ಯಕೀಯ ಕಾಲೇಜಿನ ಐದು ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿದ ನಂತರ ಗಾಬರಿಗೊಂಡ ಅಲ್ಲಿನ ನಿವಾಸಿಗಳು ಕಟ್ಟಡದ ಬಾಲ್ಕನಿಯಿಂದ ಕೆಳಗೆ ಜಿಗಿಯಲು ಅಥವಾ ಇಳಿಯಲು ಮುಂದಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಪತನಗೊಂಡ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿರುವ ನಡುವೆಯೇ ಮಹಿಳೆಯೊಬ್ಬರು ಕಂಬಿಗಳನ್ನು ಹಿಡಿದು ಬಾಲ್ಕನಿಯಿಂದ ಇಳಿಯಲು ಮುಂದಾಗಿರುವ ದೃಶ್ಯ ವಿಡಿಯೊದಲ್ಲಿದೆ.
ಕ್ಯಾಂಪಸ್ ಆವರಣದಲ್ಲಿ ನಿಂತಿದ್ದ ಕೆಲವರು ಇದನ್ನು ಕಂಡು ಆತಂಕದಿಂದ ಕೂಗುವ ಹಾಗೂ ಮಹಿಳೆಯ ರೀತಿಯೇ ಮತ್ತೊಬ್ಬ ವ್ಯಕ್ತಿ ಸಹ ಬಾಲ್ಕನಿಯಿಂದ ಜಿಗಿಯುವ ದೃಶ್ಯವೂ ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.