ADVERTISEMENT

ತಮಿಳುನಾಡು ಬಿಜೆಪಿಯಿಂದ ಸುದ್ದಿ ವಾಹಿನಿ?

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 13:07 IST
Last Updated 23 ಜನವರಿ 2023, 13:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ: ತಮಿಳುನಾಡು ಬಿಜೆಪಿ ಘಟಕ ಸುದ್ದಿ ವಾಹಿನಿ ಆರಂಭಿಸಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ವಾಹಿನಿಯ ಉಸ್ತುವಾರಿಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರಿಗೆ ವಹಿಸಲಾಗುವುದು. ಇದಕ್ಕಾಗಿ ₹15 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಇದಕ್ಕಾಗಿ ಸಂಪನ್ಮೂಲ ಸಂಗ್ರಹ ಮಾಡಲಿವೆ ಎನ್ನಲಾಗಿದೆ.

ಸದ್ಯ ಚಾನೆಲ್ ಆರಂಭದ ದಿನಾಂಕ ನಿರ್ಧಾರವಾಗಿಲ್ಲ. ಇದಕ್ಕೆ ಜನಂ ಟಿವಿ ಎಂದು ಹೆಸರಿಸಲಾಗುವುದು ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಕೇರಳದಲ್ಲಿ ಬಿಜೆಪಿಯ ಮುಖವಾಣಿ ಎಂದು ಪರಿಗಣಿಸಲಾದ ‘ಜನಂ‘ ಟಿವಿಯ ವಿಸ್ತರಣೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.