ADVERTISEMENT

ಮಣಿಪುರ ಹತ್ಯೆ ಪ್ರಕರಣ: ಪಿಎಲ್ಎ ಸದಸ್ಯರ ಸುಳಿವು ನೀಡಿದರೆ ನಗದು ಬಹುಮಾನ –ಎನ್‌ಐಎ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 11:03 IST
Last Updated 6 ಜನವರಿ 2022, 11:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಅಸ್ಸಾಂ ರೈಫಲ್ಸ್‌ನ ಕರ್ನಲ್‌ ಸೇರಿ ಎಂಟು ಜನರ ಹತ್ಯೆ ಕೃತ್ಯದಲ್ಲಿ ಭಾಗಿಯಾಗಿದ್ದ ಪೀಪಲ್ಸ್‌ ಲಿಬರೇಷನ್‌ ಆರ್ಮಿ (ಪಿಎಲ್ಎ), ಮಣಿಪುರ್‌ ನಾಗಾ ಪೀಪಲ್ಸ್‌ ಫ್ರಂಟ್‌ನ (ಎಂಎನ್‌ಪಿಎಫ್‌) 10 ಸದಸ್ಯರ ಸುಳಿವು ನೀಡಿದವರಿಗೆ ಎನ್‌ಐಎ ನಗದು ಬಹುಮಾನ ಘೋಷಿಸಿದೆ.

ನವೆಂಬರ್‌ನಲ್ಲಿ ಮಣಿಪುರದ ಚುರ್ಚಂದ್‌ಪುರ್‌ನಲ್ಲಿ ಕೃತ್ಯ ನಡೆದಿತ್ತು. ಮಣಿಪುರದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿರುವ ಈ ತಂಡಗಳು 46 ಅಸ್ಸಾಂನ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿ ಕರ್ನಲ್‌ ವಿಬ್ಲಬ್ ತ್ರಿಪಾಠಿ ಅವರಿದ್ದ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿದ್ದವು. ಕರ್ನಲ್‌ ಅವರ ಪತ್ನಿ, ಐದು ವರ್ಷದ ಪುತ್ರ, ನಾಲ್ಕು ವರ್ಷದ ಪುತ್ರಿ ಕೂಡಾ ಮೃತಪಟ್ಟಿದ್ದರು. ಆರು ಜನರು ಗಾಯಗೊಂಡಿದ್ದರು.

ಈ ಕೃತ್ಯದ ಹೊಣೆಯನ್ನು ಹೊತ್ತು ಪಿಎಲ್‌ಎ ಮತ್ತು ಎಂಎನ್‌ಪಿಎಫ್‌ ತಂಡಗಳು ಬಳಿಕ ಹೇಳಿಕೆ ನೀಡಿದ್ದವು. ಈ ತಂಡಗಳಿಗೆ ಸೇರಿದ 10 ಸದಸ್ಯರ ಸುಳಿವು ನೀಡಿದವರಿಗೆ ₹ 4 ಲಕ್ಷದಿಂದ ರಿಂದ ₹ 8 ಲಕ್ಷವರೆಗೂ ಎನ್‌ಐಎ ನಗದು ಬಹುಮಾನ ಘೋಷಿಸಿದೆ.

ADVERTISEMENT

ಚಹೋಯಿ ಅಲಿಯಾಸ್ ಪುಖ್ರಂಬನ್‌ ಮಣಿ ಮೀಟಿ ಮತ್ತು ಸಗೋಲ್‌ಸೆಂ ಇನೌಚ ಸುಳಿವು ನೀಡಿದವರಿಗೆ ಗರಿಷ್ಠ ಅಂದರೆ ₹ 8 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ. ಕೃತ್ಯ ಕುರಿತು ಪ್ರಕರಣ ದಾಖಲಿಸಿದ್ದ ಪೊಲೀಸರು ನಂತರ ಎನ್‌ಐಎಗೆ ಮೊಕದ್ದಮೆ ವರ್ಗಾಯಿಸಿದ್ದರು.ಸುಳಿವು ನೀಡಿದವರ ವಿವರಗಳನ್ನು ಗೋಪ್ಯವಾಗಿ ಇಡಲಾಗುವುದು ಎಂದು ಎನ್‌ಐಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.