ನವದೆಹಲಿ: ಜಾರ್ಖಂಡ್‌ನಲ್ಲಿ ತಮ್ಮ ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಜನರನ್ನು ಬಲವಂತವಾಗಿ ಸೇರಿಸಿಕೊಂಡಿದ್ದಾರೆ ಮತ್ತು ಸುಲಿಗೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಡಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂವರು ನಕ್ಸಲರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕೃಷ್ಣ ಹಸಂದಾ, ಅಭಿಜಿತ್ ಕೋರಾ ಮತ್ತು ರಾಮದಯಾಳ್ ಮಹತೋ ವಿರುದ್ಧ ಎನ್‌ಐಎ ರಾಂಚಿಯ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿಯನ್ನು ಶುಕ್ರವಾರ ಸಲ್ಲಿಸಿದೆ.
ಮೂವರೂ ನಿಷೇಧಿತ ಸಂಘಟನೆಯಾದ ಸಿಪಿಐನ (ಮಾವೋವಾದಿ) ಸಕ್ರಿಯ ಸದಸ್ಯರಾಗಿದ್ದಾರೆ. ಕೋರಾ ಬಿಹಾರದವರಾಗಿದ್ದು, ಉಳಿದ ಇಬ್ಬರು ಜಾರ್ಖಂಡ್‌ನವರು ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.