ನವದೆಹಲಿ: ಜಾರ್ಖಂಡ್‌ನಲ್ಲಿ 2024ರಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿರುದ್ಧ ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿದೆ.
ಬಿಹಾರ್‌ನ ಅಭಿಜಿತ್ ಕೊಡಾ ಅಲಿಯಾಸ್ ಸುನಿಲ್ ಕೊಡಾ ಪ್ರಮುಖ ಆರೋಪಿ. ಸಿಪಿಐನ ಶಸಸ್ತ್ರ ಪಡೆಯ ಸದಸ್ಯನಾಗಿದ್ದ ಅಭಿಜಿತ್ ಕೊಡಾ, ಹಲವು ದಾಳಿಗಳ ಹಿಂದಿನ ಪ್ರಮುಖ ಸೂತ್ರಧಾರನಾಗಿದ್ದ. ನಕ್ಸಲ್ ಮುಖಂಡರ ನಡುವೆ ಸಂಪರ್ಕ ಸೇತುವಾಗಿದ್ದುಕೊಂಡು, ಸಂಘಟನೆ ಬಲಪಡಿಸುವುದರಲ್ಲಿ ಸಕ್ರಿಯನಾಗಿದ್ದ’ ಎಂದು ಎನ್‌ಐಎ ಹೇಳಿದೆ.
ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಸುಂದರಿ ಪಹರಿ ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಕಾರ್ಯಾಚರಣೆ ನಡೆಸುವಾಗ ನಕ್ಸಲರು ದಾಳಿ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.