ADVERTISEMENT

Terrorist Infiltration Case: ಜಮ್ಮುವಿನ 12 ಕಡೆ ಎನ್‌ಐಎ ದಾಳಿ

ಪಿಟಿಐ
Published 19 ಮಾರ್ಚ್ 2025, 6:09 IST
Last Updated 19 ಮಾರ್ಚ್ 2025, 6:09 IST
<div class="paragraphs"><p>ಎನ್‌ಐಎ ತಂಡ ಮನೆಯೊಂದರ ಮೇಲೆ ದಾಳಿ ನಡೆಸುತ್ತಿರುವಾಗ ಭದ್ರತಾ ಸಿಬ್ಬಂದಿ ಹೊರಗೆ ಕಾವಲು ಕಾಯುತ್ತಿರುವುದು.</p></div>

ಎನ್‌ಐಎ ತಂಡ ಮನೆಯೊಂದರ ಮೇಲೆ ದಾಳಿ ನಡೆಸುತ್ತಿರುವಾಗ ಭದ್ರತಾ ಸಿಬ್ಬಂದಿ ಹೊರಗೆ ಕಾವಲು ಕಾಯುತ್ತಿರುವುದು.

   

ಪಿಟಿಐ

ನವದೆಹಲಿ: ಉಗ್ರರ ಒಳನುಸುಳುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಬುಧವಾರ ಜಮ್ಮುವಿನ ಹಲವು ಕಡೆಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

12 ಕಡೆಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.

ನಿಷೇಧಿತ ಸಂಘಟನೆಗಳಾದ ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ)ಗೆ ಸೇರಿದ ಸಕ್ರಿಯ ಭಯೋತ್ಪಾದಕರು ಅಂತರರಾಷ್ಟ್ರೀಯ ಗಡಿ(ಐಬಿ) ಮತ್ತು ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮೂಲಕ ಭಾರತಕ್ಕೆ ನುಸುಳಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು.

ಜಮ್ಮುವಿನ ಹಳ್ಳಿಗಳಲ್ಲಿ ನೆಲೆಸಿರುವ ಭಯೋತ್ಪಾದಕ ಸಂಘಟನೆಗಳು ಹಾಗೂ ಇತರ ಸಹಚರರು ಇಂತಹ ಒಳನುಸುಳುವಿಕೆಯನ್ನು ಸುಗಮಗೊಳಿಸುತ್ತಿದ್ದು, ಭಯೋತ್ಪಾದಕರಿಗೆ ಆಹಾರ, ವಸತಿ ಮತ್ತು ಹಣದ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.