ADVERTISEMENT

ಮಂಗಳೂರು, ಕೊಯಮತ್ತೂರು ಸ್ಫೋಟ: ದಕ್ಷಿಣ ಭಾರತದಲ್ಲಿ 60 ಕಡೆ ಎನ್‌ಐಎ ದಾಳಿ

ಪಿಟಿಐ
Published 15 ಫೆಬ್ರುವರಿ 2023, 7:45 IST
Last Updated 15 ಫೆಬ್ರುವರಿ 2023, 7:45 IST
ರಾಷ್ಟ್ರೀಯ ತನಿಖಾ ದಳ: ಪಿಟಿಐ ಚಿತ್ರ
ರಾಷ್ಟ್ರೀಯ ತನಿಖಾ ದಳ: ಪಿಟಿಐ ಚಿತ್ರ   

ಚೆನ್ನೈ: ಕಳೆದ ವರ್ಷ ಮಂಗಳೂರಿನಲ್ಲಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಮತ್ತು ಕೊಯಮತ್ತೂರಿನ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಕಾರು ಸ್ಫೋಟಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು ಕರ್ನಾಟಕ, ಕೇರಳ ಮತ್ತು ತಮಿಳುನಾಡು ಸೇರಿ ದಕ್ಷಿಣ ಭಾರತದ 60 ಕಡೆ ದಾಳಿ ನಡೆಸಿದೆ.

ಬುಧವಾರ ಬೆಳಗಿನ ಜಾವದಿಂದ ಚೆನ್ನೈ, ಕೊಯಮತ್ತೂರು, ತಿರುನಲ್ವೇಲಿ, ನಾಗಪಟ್ಟಣ ಮುಂತಾದ ಕಡೆ ದಾಳಿ ನಡೆದಿದೆ.

ಆರೋಪಿ ಜೊತೆಗಿನ ನಂಟಿನ ಬಗ್ಗೆ ಮಾಹಿತಿ ಕಲೆ ಹಾಕಲು ಕೊಯಮತ್ತೂರಿನಲ್ಲೆ 16 ಕಡೆ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಈವರೆಗೆ ಐದು ಮಂದಿಯನ್ನು ಬಂಧಿಸಿದ್ದು, ರಾಜ್ಯ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

ಅಕ್ಟೋಬರ್ 23 2020ರಂದು ಕೊಯಮತ್ತೂರಿನ ಕೈಗಾರಿಕಾ ಪ್ರದೇಶದ ದೇವಸ್ಥಾನದಿಂದ ಕೆಲ ಮೀಟರ್‌ಗಳ ದೂರದಲ್ಲಿ ನಿಂತಿದ್ದ ಮಾರುತಿ 800 ಕಾರಿನಲ್ಲಿ ಸಿಲಂಡರ್ ಸಫೋಟ್ಗೊಮಡಿತ್ತು. ಘಟನೆಯಲ್ಲಿ 29 ವರ್ಷದ ಜಮೀಶಾ ಮುಬಿನ್ ಎಂಬುವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.