ನವದೆಹಲಿ: ಇಂಫಾಲ್, ಚೆನ್ನೈ ಹಾಗೂ ರಾಂಚಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ(ಎನ್‌ಐಎ)ಹೊಸ ಶಾಖೆಗಳನ್ನು ಆರಂಭಿಸಲು ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಎನ್‌ಐಎ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.
ಭಯೋತ್ಪಾದನೆಗೆ ಸಂಬಂಧಿಸಿದ ಪ್ರಕರಣಗಳು ಹಾಗೂ ರಾಷ್ಟ್ರೀಯ ಭದ್ರತೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಇದು ಬಲಪಡಿಸಲಿದೆ. ಜೊತೆಗೆ ಭಯೋತ್ಪಾದನೆ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯಾಚರಣೆ ನಡೆಸಲು ಇದು ಸಹಕಾರಿಯಾಗಲಿದೆ.ಪ್ರಸ್ತುತ ಗುವಾಹಟಿ, ಮುಂಬೈ, ಜಮ್ಮು, ಕೋಲ್ಕತ್ತ, ಹೈದರಾಬಾದ್, ಕೊಚ್ಚಿ, ಲಖನೌ, ರಾಯ್‌ಪುರ ಮತ್ತು ಚಂಡೀಗಡದಲ್ಲಿ ಎನ್‌ಐಎ ಕಚೇರಿಗಳಿವೆ. ಜೊತೆಗೆ ನವದೆಹಲಿಯಲ್ಲಿ ಎನ್‌ಐಎ ವಿಶೇಷ ಘಟಕಗಳಿವೆ ಎಂದು ಅಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.