ADVERTISEMENT

ನೀರವ್‌ ಅಕ್ರಮ ಬಂಗಲೆ ನೆಲಸಮಕ್ಕೆ ಕ್ರಮ: ಮಹಾರಾಷ್ಟ್ರ

ಪಿಟಿಐ
Published 7 ಡಿಸೆಂಬರ್ 2018, 17:14 IST
Last Updated 7 ಡಿಸೆಂಬರ್ 2018, 17:14 IST
ನೀರವ್ ಮೋದಿ
ನೀರವ್ ಮೋದಿ   

ಮುಂಬೈ:ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಚಿನ್ನಾಭರಣ ಉದ್ಯಮಿ ನೀರವ್‌ ಮೋದಿಗೆ ಸೇರಿದ ಅಕ್ರಮ ಬಂಗಲೆಯನ್ನು ನೆಲಸಮಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಶುಕ್ರವಾರ ಹೇಳಿದೆ.

ರಾಯಗಡ ಜಿಲ್ಲೆಯ ಅಲಿಬಾಗ್‌ ಬೀಚ್‌ ಬಳಿಯ ಈ ಬಂಗಲೆಯನ್ನು ರಾಜ್ಯ ಸರ್ಕಾರ ಮತ್ತು ಕರಾವಳಿ ವಲಯ ನಿಯಮಗಳಿಗೆ ವಿರುದ್ಧವಾಗಿ ಕಟ್ಟಲಾಗಿದ್ದು ಅದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲಾಗುವುದು ಎಂದು ಸರ್ಕಾರದ ಪರ ವಕೀಲ ಪಿ.ಬಿ. ಕಾಕಡೆ, ಮುಖ್ಯನ್ಯಾಯಮೂರ್ತಿ ನರೇಶ್‌ ಪಾಟೀಲ ಮತ್ತು ನ್ಯಾಯಮೂರ್ತಿ ಎಂ.ಎಸ್. ಕಾರ್ನಿಕ್‌ ಅವರನ್ನೊಳಗೊಂಡ ಪೀಠಕ್ಕೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT