ADVERTISEMENT

ಅಯ್ಯಪ್ಪ ಭಕ್ತರಿಗೆ ಹಲ್ಲೆ ನಡೆಸಿ ಸಚಿವರು ಪಾಪ ಮಾಡಿದ್ದಾರೆ: ನಿರ್ಮಲಾ ಸೀತಾರಾಮನ್

ಪಿಟಿಐ
Published 4 ಏಪ್ರಿಲ್ 2021, 5:24 IST
Last Updated 4 ಏಪ್ರಿಲ್ 2021, 5:24 IST
ಸಚಿವೆ ನಿರ್ಮಾಲಾ ಸೀತಾರಾಮನ್
ಸಚಿವೆ ನಿರ್ಮಾಲಾ ಸೀತಾರಾಮನ್    

ತಿರುವನಂತಪುರಂ: ಕೇರಳದಲ್ಲಿ ಶಬರಿಮಲೆ ಭಕ್ತರ ಮೇಲೆ ಪೊಲೀಸರ ಮೂಲಕ ಲಾಠಿ ಚಾರ್ಜ್ ನಡೆಸಿದ ದೇವಸ್ವಂ ಸಚಿವ ಕಡಂಪಳ್ಳಿ ಸುರೇಂದ್ರನ್ ಅವರು ಪಾಪ ಕಾರ್ಯ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ.

ದರ್ಶನಕ್ಕೆ ತೆರಳುತ್ತಿದ್ದ ಅಯ್ಯಪ್ಪ ಸ್ವಾಮಿಭಕ್ತರಮೇಲೆ ಪೊಲೀಸರು ಲಾಠಿ ಏಟು ನೀಡಿದ್ದಾರೆ. ದೇವಸ್ವಂ ಸಚಿವರ ಈ ಪಾಪ ಕಾರ್ಯ 500 ವರ್ಷ ತಪಸ್ಸು ಮಾಡಿದರೂ ಕರಗದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಉತ್ತರ ಕೇರಳ ವಿಧಾನಸಭೆ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿರುವ ಅವರು, ದೇವಸ್ವಂ ಸಚಿವ ಕಡಂಪಳ್ಳಿ ಸುರೇಂದ್ರನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ADVERTISEMENT

2018ರಲ್ಲಿ ಶಬರಿಮಲೆಗೆ ಹೊರಟಿದ್ದ ಅಯ್ಯಪ್ಪ ಸ್ವಾಮಿ ಭಕ್ತರಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ವಿಚಾರವನ್ನೇ ನಿರ್ಮಾಲಾ ಸೀತಾರಾಮನ್ ಚುನಾವಣೆ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಕೂಡ ಶಬರಿಮಲೆ ವಿಚಾರವನ್ನು ಚುನಾವಣೆಯಲ್ಲಿ ಪ್ರಸ್ತಾಪಿಸಿದ್ದರು.

ತಿರುವನಂತಪುರಂ ಜಿಲ್ಲೆಯ ಕಾಳಕೂಟಂ ವಿಧಾನಸಭಾ ಕ್ಷೇತ್ರದಿಂದ ಸಿಪಿಎಂನ ಹಿರಿಯ ನಾಯಕ ಕಡಂಪಳ್ಳಿ ಸುರೇಂದ್ರನ್ ಸ್ಪರ್ಧಿಸುತ್ತಿದ್ದು, ಅವರ ವಿರುದ್ಧ ಬಿಜೆಪಿ ಶೋಭಾ ಸುರೇಂದ್ರನ್‌ರನ್ನು ಕಣಕ್ಕಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.