ADVERTISEMENT

ಬಿಹಾರ ವಿಧಾನಪರಿಷತ್‌: ನಿತೀಶ್, ರಾಬ್ರಿ ದೇವಿ ಸೇರಿ 11 ಮಂದಿ ಅವಿರೋಧ ಆಯ್ಕೆ

ಪಿಟಿಐ
Published 14 ಮಾರ್ಚ್ 2024, 10:52 IST
Last Updated 14 ಮಾರ್ಚ್ 2024, 10:52 IST
<div class="paragraphs"><p>ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್&nbsp;</p></div>

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 

   

ಚಿತ್ರ ಕೃಪೆ–ಪಿಟಿಐ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸತತ ನಾಲ್ಕನೇ ಬಾರಿಗೆ ರಾಜ್ಯ ವಿಧಾನ ಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ 

ADVERTISEMENT

ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ನಿತೀಶ್ ಕುಮಾರ್ ಸೇರಿದಂತೆ ವಿವಿಧ ಪಕ್ಷಗಳ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 

ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್, ಉಪ ಮುಖ್ಯಮಂತ್ರಿಗಳಾದ ಬಿಜೆಪಿಯ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರು ಪರಿಷತ್‌ಗೆ ನೇಮಕಗೊಂಡಿದ್ದಾರೆ.

ಆರ್‌ಜೆಡಿಯ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಎಚ್‌ಎಂಎಂ ಪಕ್ಷದ ಸಂತೋಷ್ ಸುಮನ್ (ಎಚ್ಎಎಂ), ಬಿಜೆಪಿಯ ಮಂಗಲ್‌ ಪಾಂಡೆ ಅವರು ಆಯ್ಕೆಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.