ADVERTISEMENT

ಕಾಂಗ್ರೆಸ್‌ನಲ್ಲಿ ಜೆಡಿಯು ವಿಲೀನ ಮಾಡಲು ಹೇಳಿದ್ದ ಕಿಶೋರ್‌: ನಿತೀಶ್‌ ಹೇಳಿಕೆ

ಪಿಟಿಐ
Published 8 ಅಕ್ಟೋಬರ್ 2022, 15:08 IST
Last Updated 8 ಅಕ್ಟೋಬರ್ 2022, 15:08 IST
ಪ್ರಶಾಂತ್‌ ಕಿಶೋರ್‌ ಮತ್ತು ನಿತೀಶ್‌ ಕುಮಾರ್‌
ಪ್ರಶಾಂತ್‌ ಕಿಶೋರ್‌ ಮತ್ತು ನಿತೀಶ್‌ ಕುಮಾರ್‌    

ಸಿತಾಬ್ ದಿಯಾರಾ (ಬಿಹಾರ): ಜೆಡಿಯು ಅನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದರು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಶನಿವಾರ ಹೇಳಿದ್ದಾರೆ.

ಪ್ರಶಾಂತ್‌ ಕಿಶೋರ್ ಅವರು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದೂ ನಿತೀಶ್‌ ಕುಮಾರ್‌ ಅರೋಪಿಸಿದ್ದಾರೆ.

ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ಜನ್ಮಸ್ಥಳ ಸಿತಾಬ್ ದಿಯಾರಾದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ADVERTISEMENT

‘ಅವರು ಇತ್ತೀಚೆಗೆ ತಮ್ಮ ಕೆಲಸವೊಂದಕ್ಕಾಗಿ ನನ್ನನ್ನು ಭೇಟಿಯಾಗಲು ಬಂದಿದ್ದರು. ನಾನೇನು ಅವರನ್ನು ಆಹ್ವಾನಿಸಿರಲಿಲ್ಲ. ಅವರು ತುಂಬಾ ಮಾತನಾಡುತ್ತಾರೆ. ಆದರೆ, ನಿಜಾಂಶ ಮುಚ್ಚಿಡುತ್ತಾರೆ. ಒಮ್ಮೆ ಕಿಶೋರ್‌ ನನ್ನ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವಂತೆ ಹೇಳಿದ್ದರು’ ಎಂದು ನಿತೀಶ್‌ ಹೇಳಿದರು.

‘ಜೆಡಿಯು ನೇತೃತ್ವ ವಹಿಸಲು ನಿತೀಶ್‌ ಇತ್ತೀಚೆಗೆ ಮಾಡಿದ ಮನವಿಯನ್ನು ತಿರಸ್ಕರಿಸಿದ್ದೇನೆ’ ಎಂಬ ಕಿಶೋರ್ ಅವರ ಹೇಳಿಕೆ ಸಂಬಂಧ ನಿತೀಶ್‌ ಪ್ರತಿಕ್ರಿಯೆ ನೀಡಿದ್ದಾರೆ.

‘ಅವರು ಏನು ಬೇಕಾದರೂ ಮಾತನಾಡಲಿ, ಅವರು ಏನು ಹೇಳಿದರೂ ಅರ್ಥವಿಲ್ಲ. ಕಾಂಗ್ರೆಸ್‌ನಲ್ಲಿ ವಿಲೀನವಾಗುವಂತೆ ಹೇಳಿದ್ದ ಈ ವ್ಯಕ್ತಿ ಈಗ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

‘ಸುಮಾರು 10-15 ದಿನಗಳ ಹಿಂದೆ ನಿತೀಶ್‌ ಕುಮಾರ್‌ ನನ್ನನ್ನು ಅವರ ನಿವಾಸಕ್ಕೆ ಕರೆಸಿಕೊಂಡು ಜೆಡಿಯು ನಾಯಕತ್ವ ವಹಿಸಿಕೊಳ್ಳುವಂತೆ ಕೇಳಿಕೊಂಡಿದ್ದರು. ಅದು ಸಾಧ್ಯವಿಲ್ಲ ಎಂದು ನಾನು ಹೇಳಿದ್ದೆ’ ಎಂದು ಕಿಶೋರ್ ಮಂಗಳವಾರ ಹೇಳಿಕೊಂಡಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.