
ಎಐ ಚಿತ್ರ
ನವದೆಹಲಿ: ಜನರಿಗೆ ಅರ್ಥವಾಗುವ ರೀತಿಯಲ್ಲಿ ಔಷಧಿ ಚೀಟಿ ಬರೆಯುವುದನ್ನು ವೈದ್ಯಕೀಯ ಶಿಕ್ಷಣದ ಅವಧಿಯಲ್ಲೇ ತರಬೇತಿ ನೀಡುವಂತೆ ದೇಶದ ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸೂಚಿಸಿದೆ.
ಈ ಕುರಿತ ಮೇಲ್ವಿಚಾರಣೆಗಾಗಿ ಉಪ ಸಮಿತಿಗಳನ್ನು ರಚಿಸುವಂತೆ ಅದು ನಿರ್ದೇಶನ ನೀಡಿದೆ. ಈ ಸಮಿತಿಯು ಔಷಧ ಚೀಟಿಯ ಸ್ವರೂಪದ ವಿಶ್ಲೇಷಣೆ ಮಾಡಲಿದೆ, ನಿಯಮ ಉಲ್ಲಂಘನೆಯನ್ನು ಗುರುತಿಸಲಿದೆ ಮತ್ತು ಸರಿಯಾದ ಕ್ರಮಗಳನ್ನು ಶಿಫಾರಸು ಮಾಡಲಿದೆ.
ಈ ಸಂಬಂಧ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಎಲ್ಲಾ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು, ಡೀನ್‌ಗಳಿಗೆ ಡಿಸೆಂಬರ್ 15ರಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಎನ್‌ಎಂಸಿ ತಿಳಿಸಿದೆ.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆಗಸ್ಟ್ 17ರಂದು ಹೊರಡಿಸಿರುವ ಆದೇಶದ ಆಧಾರದಲ್ಲಿ ಈ ಸುತ್ತೋಲೆ ಹೊಡಿಸಲಾಗಿದೆ ಎಂದು ತಿಳಿಸಿದೆ.
‘ಸ್ಪಷ್ಟವಾಗಿ ಓದಬಲ್ಲ ಔಷಧಿ ಚೀಟಿಯು ಸಂವಿಧಾನದ 21ನೇ ವಿಧಿಯಡಿ ಬರುವ ಆರೋಗ್ಯದ ಹಕ್ಕಿನ ಪ್ರಮುಖ ಅಂಶ’ ಎಂದು ಕೋರ್ಟ್ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.