ADVERTISEMENT

ಮಹಾರಾಷ್ಟ್ರ: ಅಟಲ್ ಸಾಗರ ಸೇತುವೆ ಮೇಲೆ ಬೈಕ್‌, ಆಟೊ ಸಂಚಾರಕ್ಕೆ ನಿರ್ಬಂಧ

ಏಜೆನ್ಸೀಸ್
Published 11 ಜನವರಿ 2024, 3:13 IST
Last Updated 11 ಜನವರಿ 2024, 3:13 IST
<div class="paragraphs"><p>ಅಟಲ್ ಸಾಗರ ಸೇತುವೆ</p></div>

ಅಟಲ್ ಸಾಗರ ಸೇತುವೆ

   

ಮುಂಬೈ: ದೇಶದ ಉದ್ದನೆಯ ಸಾಗರ ಸೇತುವೆ (ಮುಂಬೈ ಟ್ರಾನ್ಸ್‌ ಹಾರ್ಬರ್ ಲಿಂಕ್’–ಎಂಟಿಎಚ್‌ಎಲ್‌)ಯನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಉದ್ಘಾಟಿಸುವರು.

ಈ ಸೇತುವೆಯನ್ನು ‘ಅಟಲ್‌ ಬಿಹಾರಿ ವಾಜಪೇಯಿ ಸ್ಮೃತಿ ಸೇವರಿ ನ್ಹಾವಾ ಶೇವಾ ಅಟಲ್ ಸೇತು’ ಎಂದೂ ಕರೆಯಲಾಗುತ್ತದೆ. ಈ ಸೇತುವೆ ಮೇಲೆ ಬೈಕ್‌, ಸ್ಕೂಟರ್‌, ಆಟೊಗಳು, ಟ್ರ್ಯಾಕ್ಟರ್‌ಗಳು ಹಾಗೂ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. 

ADVERTISEMENT

ಕಾರುಗಳು, ಟ್ಯಾಕ್ಸಿಗಳು, ಲಘು ವಾಹನಗಳು, ಮಿನಿ ಬಸ್‌ಗಳು ಮತ್ತು ಎರಡು ಆ್ಯಕ್ಸಲ್‌ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸೇತುವೆಯ ಮೇಲೆ ಈ ವಾಹನಗಳು ಗಂಟೆಗೆ 100 ಕಿ.ಮೀಟರ್ ವೇಗದಲ್ಲಿ ಚಲಿಸಬೇಕು. ವಾಹನಗಳು ಸೇತುವೆ ಮೇಲೆ ಬರುವಾಗ ಮತ್ತು ಇಳಿಯುವಾಗ 40 ಮೀಟರ್‌ ವೇಗದಲ್ಲಿ ಮಾತ್ರ ಚಲಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. 

 ಈ ಸಾಗರ ಸೇತುವೆಯು ಮುಂಬೈನ ಸೇವರಿ ಹಾಗೂ ರಾಯಗಡ ಜಿಲ್ಲೆಯ ನ್ಹಾವಾ ಶೇವಾ ನಗರವನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಈ ಸ್ಥಳಗಳ ನಡುವಿನ ಸಂಚಾರಕ್ಕೆ ಎರಡೂವರೆ ಗಂಟೆಗೂ ಅಧಿಕ ಸಮಯಬೇಕು. ಈ ಸಾಗರ ಸೇತುವೆ ಸಂಚಾರಕ್ಕೆ ಮುಕ್ತಗೊಂಡಾಗ ಪ್ರಯಾಣಕ್ಕೆ 15–20 ನಿಮಿಷಗಳಷ್ಟು ಸಾಕು.

ಎಂಟಿಎಚ್‌ಎಲ್‌ ಒಟ್ಟು 21.8 ಕಿ.ಮೀ. ಉದ್ದ ಇದ್ದು, ಸಾಗರದಲ್ಲಿ ಹಾಯ್ದು ಹೋಗುವ ಸೇತುವೆಯ ಉದ್ದ 16.5 ಕಿ.ಮೀ.ನಷ್ಟಿದೆ. ಇಲ್ಲಿನ ಸಂಚಾರಕ್ಕೆ ಮಹಾರಾಷ್ಟ್ರ ಸರ್ಕಾರ ₹250 ಟೋಲ್‌ ಶುಲ್ಕ ನಿಗದಿ ಮಾಡಿದೆ. 

ಚೀನಾದಲ್ಲಿರುವ ಹ್ಯಾಂಗ್‌ಜೌ ಬೇ ಬ್ರಿಡ್ಜ್ (36 ಕಿ.ಮೀ. ಉದ್ದ) ಹಾಗೂ ಸೌದಿ ಅರೇಬಿಯಾದಲ್ಲಿ ಕಿಂಗ್‌ ಫಹಾದ್ ಕಾಸ್‌ವೇ (26 ಕಿ.ಮೀ. ಉದ್ದ) ವಿಶ್ವದ ಇತರ ಎರಡು ಸಾಗರ ಸೇತುವೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.