ADVERTISEMENT

ನಂದಿನಿ ಜೊತೆ ಸ್ಪರ್ಧೆ ಇಲ್ಲ, ಆನ್‌ಲೈನ್‌ ವೇದಿಕೆಯಲ್ಲಷ್ಟೇ ಮಾರಾಟ: ಅಮೂಲ್

ಪಿಟಿಐ
Published 11 ಏಪ್ರಿಲ್ 2023, 14:29 IST
Last Updated 11 ಏಪ್ರಿಲ್ 2023, 14:29 IST
   

ನವದೆಹಲಿ: ‘ಕರ್ನಾಟಕದಲ್ಲಿ ‘ನಂದಿನಿ’ ಬ್ರ್ಯಾಂಡ್‌ನ ಉತ್ಪನ್ನಗಳ ಜೊತೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ‘ಅಮೂಲ್‘ ತನ್ನ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಆನ್‌ಲೈನ್ ವೇದಿಕೆ ಮೂಲಕವಷ್ಟೇ ಮಾರಾಟ ಮಾಡಲಿದೆ‘ ಎಂದು ‘ಅಮೂಲ್‌’ ಸಂಸ್ಥೆಯು ಸ್ಪಷ್ಟಪಡಿಸಿದೆ.

ಅಮೂಲ್‌ ಬ್ರ್ಯಾಂಡ್‌ನ ಉತ್ಪನ್ನಗಳನ್ನು ತಯಾರಿಸುವ ಗುಜರಾತ್‌ ಹಾಲು ಸಹಕಾರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯೆನ್‌ ಮೆಹ್ತಾ ಅವರು, ‘ಎರಡೂ ಒಕ್ಕೂಟಗಳು ರೈತರದೇ ಆಗಿವೆ. ಎರಡು ಬ್ರ್ಯಾಂಡ್‌ಗಳ ನಡುವೆ ಸ್ಪರ್ಧೆ ಚಿತ್ರಣವೇ ಇಲ್ಲ’ ಎಂದು ಹೇಳಿದರು.

ಕರ್ನಾಟಕದಲ್ಲಿ ಅಮೂಲ್‌ ಬ್ರ್ಯಾಂಡ್‌ನ ಹಾಲು, ಮೊಸರು ಮಾರಾಟ ಪ್ರಕ್ರಿಯೆಯು ವಿವಾದದ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ‘ಅಮೂಲ್ ಉತ್ಪನ್ನಗಳು ಪೂರ್ಣ ಪ್ರಮಾಣದಲ್ಲಿ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ 2015–16ರಿಂದಲೇ ಅಮೂಲ್ ಹಾಲು ಮಾರಾಟದಲ್ಲಿ ತೊಡಗಿದೆ. ಸರ್ಕಾರದ ಸಬ್ಸಿಡಿ ಕಾರಣದಿಂದ ‘ನಂದಿನಿ’ ಹಾಲು, ಮೊಸರು ದರ ಅಗ್ಗವಾಗಿದೆ. ಅಮೂಲ್‌ ಹಾಲಿನ ದರ ಲೀಟರಿಗೆ ₹ 54 ಇದ್ದರೆ, ‘ನಂದಿನಿ’ ಹಾಲಿನ ದರ ಲಿಟರಿಗೆ ₹ 39 ಆಗಿದೆ. ಈ ಕಾರಣದಿಂದಲೂ ಉಭಯ ಬ್ರ್ಯಾಂಡ್‌ಗಳ ನಡುವೆ ಸ್ಪರ್ಧೆಯ ಪ್ರಶ್ನೆ ಉದ್ಭವಿಸದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.