ADVERTISEMENT

ಮಿಲಿಟರಿ ಕ್ಯಾಂಟಿನ್‌ಗಳಲ್ಲಿ ಸ್ವದೇಶಿ ವಸ್ತು: ನಿರ್ಧಾರವಾಗಿಲ್ಲ ಎಂದ ಕೇಂದ್ರ

ಪಿಟಿಐ
Published 19 ಸೆಪ್ಟೆಂಬರ್ 2020, 13:42 IST
Last Updated 19 ಸೆಪ್ಟೆಂಬರ್ 2020, 13:42 IST
ಶ್ರೀಪಾದ್‌ ನಾಯ್ಕ್‌
ಶ್ರೀಪಾದ್‌ ನಾಯ್ಕ್‌   

ನವದೆಹಲಿ: ಮಿಲಿಟರಿ ಕ್ಯಾಂಟಿನ್‌ಗಳಲ್ಲಿ ‘ಸ್ವದೇಶಿ’ ವಸ್ತುಗಳನ್ನಷ್ಟೇ ಮಾರಾಟ ಮಾಡಬೇಕು ಎನ್ನುವ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ರಕ್ಷಣಾ ಇಲಾಖೆ ಶನಿವಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಇಲಾಖೆ ರಾಜ್ಯ ಖಾತೆ ಸಚಿವ ಶ್ರೀಪಾದ್‌ ನಾಯ್ಕ್, ‘ಮಿಲಿಟರಿ ಕ್ಯಾಂಟೀನ್‌ಗಳಲ್ಲಿ 2017–18ರಲ್ಲಿ ₹17,190 ಕೋಟಿ, 2018–19ರಲ್ಲಿ ₹18,917 ಕೋಟಿ ಹಾಗೂ 2019–20ರಲ್ಲಿ 17,588 ಕೋಟಿ ವಹಿವಾಟು ನಡೆದಿದೆ. 2020–21ನೇ ಆರ್ಥಿಕ ವರ್ಷದಲ್ಲಿ ಆಗಸ್ಟ್‌ವರೆಗೆ ₹3,692 ಕೋಟಿ ವಹಿವಾಟು ನಡೆದಿದೆ. ಮಿಲಿಟರಿ ಕ್ಯಾಂಟಿನ್‌ಗಳಲ್ಲಿ ಕೇವಲ ಸ್ವದೇಶಿ ವಸ್ತುಗಳನ್ನೇ ಮಾರಾಟ ಮಾಡಬೇಕು ಎನ್ನುವ ಕುರಿತು ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

37 ಏರ್‌ಫೀಲ್ಡ್ಸ್‌ಗಳ ಆಧುನೀಕರಣ: 37 ಏರ್‌ಫೀಲ್ಡ್ಸ್‌ಗಳನ್ನು ಆಧುನೀಕರಣಗೊಳಿಸಲುಸರ್ಕಾರ, ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದೆಯೇ ಎನ್ನುವ ಪ್ರತ್ಯೇಕ ಪ್ರಶ್ನೆಗೆ, ಶ್ರೀಪಾದ್‌ ನಾಯ್ಕ್‌‌ ಅಹುದೆನ್ನುವ ಉತ್ತರ ನೀಡಿದರು. ‘ಏರ್‌ಫೀಲ್ಡ್ಸ್‌ಗಳ ಮೂಲಸೌಕರ್ಯಗಳ ಆಧುನೀಕರಣದಿಂದಾಗಿ ಅವುಗಳ ಸಾಮರ್ಥ್ಯ ಹೆಚ್ಚಾಗಲಿದೆ. ರಾತ್ರಿಯ ವೇಳೆ ಕಾರ್ಯಾಚರಣೆ ಸೇರಿದಂತೆ ಯಾವುದೇ ಹವಾಮಾನದಲ್ಲೂ ಏರ್‌ಫೀಲ್ಡ್ಸ್‌ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲಿವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.