ADVERTISEMENT

ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಬಂಧನ

ಪಿಟಿಐ
Published 10 ಮೇ 2020, 20:00 IST
Last Updated 10 ಮೇ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ತನ್ನ ಸಂಸ್ಥೆಯಲ್ಲಿ ಮುಸಲ್ಮಾನ ಉದ್ಯೋಗಿಗಳಿಲ್ಲ ಎಂಬ ಒಕ್ಕಣೆಯಿರುವ ಸಂದೇಶವನ್ನು ರವಾನಿಸಿ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲು ಮುಂದಾಗಿದ್ದ 32 ವರ್ಷದ ವ್ಯಕ್ತಿಯನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ.

’ಜೈನ ಬೇಕರಿ ಮತ್ತು ಕನ್ಫೆಕ್ಷನರಿಸ್’‌ ಮಾಲೀಕ ಪ್ರಶಾಂತ್‌ ತನ್ನ ಉತ್ಪನ್ನಗಳಿಗೆ ಆನ್‌ಲೈನ್‌ ಪ್ರಚಾರ ನೀಡಿದ್ದ. ‘ಈ ಉತ್ಪನ್ನ
ಗಳನ್ನು ಜೈನ ಸಮುದಾಯದವರು ತಯಾರಿಸಿದ್ದಾರೆಯೇ ಹೊರತುಮುಸ್ಲಿಮರಲ್ಲ’ ಎಂಬ ಒಕ್ಕಣೆಯಿರುವ ಜಾಹೀರಾತನ್ನು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದ.

ಚೆನ್ನೈನ ಪಶ್ಚಿಮ ಮಹಾಬಲಂ ಪ್ರದೇಶದಲ್ಲಿರುವ ಈ ಬೇಕರಿಯಲ್ಲಿಮುಸ್ಲಿಂ ಸಮುದಾಯದವರು ಆಹಾರತಯಾರಿಸುತ್ತಾರೆ ಎಂಬ ವದಂತಿ ಹರಡಿದ್ದರಿಂದ ಈ ರೀತಿ ಮಾಡಿರುವುದಾಗಿ ಸ್ಪಷ್ಟನೆ ನೀಡಲಾಗಿದೆ.

ADVERTISEMENT

ಮುಸ್ಲಿಮರ ಬಗ್ಗೆ ಪೂರ್ವಗ್ರಹಪೀಡಿತ ಸಂದೇಶ ಕಳುಹಿಸಿದ ಆರೋಪದಲ್ಲಿ ಆತನನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.