ADVERTISEMENT

ಪಾಸ್‌ಪೋರ್ಟ್ ಅರ್ಜಿ ಪರಿಶೀಲನೆಗಾಗಿ ಇನ್ಮುಂದೆ ಠಾಣೆಗೆ ಹೋಗಬೇಕಿಲ್ಲ!

ಪಿಟಿಐ
Published 13 ಮಾರ್ಚ್ 2022, 10:41 IST
Last Updated 13 ಮಾರ್ಚ್ 2022, 10:41 IST
ಸಂಜಯ್ ಪಾಂಡೆ, ಪೊಲೀಸ್ ಆಯುಕ್ತ ಮುಂಬೈ
ಸಂಜಯ್ ಪಾಂಡೆ, ಪೊಲೀಸ್ ಆಯುಕ್ತ ಮುಂಬೈ   

ಮುಂಬೈ: ಪಾಸ್‌ಪೋರ್ಟ‌್‌ಗಾಗಿ ಅರ್ಜಿ ಸಲ್ಲಿಸಿದವರು ಇನ್ನು ಮುಂದೆ ಪಾಸ್‌ಪೋರ್ಟ್ ಅರ್ಜಿ ಪರಿಶೀಲನೆಗಾಗಿ ಪೊಲೀಸ್ ಠಾಣೆಗಳಿಗೆ ಬರಬೇಕಿಲ್ಲ ಎಂದು ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಹೇಳಿದ್ದಾರೆ.

‘ಪೊಲೀಸ್ ಕಾನ್‌ಸ್ಟೆಬಲ್ ಅವರೇ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದವರ ನಿವಾಸಕ್ಕೆ ತೆರಳಿಪಾಸ್‌ಪೋರ್ಟ್ ಪರಿಶೀಲನೆ ಪ್ರಕ್ರಿಯೆಯನ್ನು ಮುಗಿಸಲಿದ್ದಾರೆ. ಆದರೆ ಯಾವುದೇ ಗೊಂದಲಗಳು ಮತ್ತು ವ್ಯತ್ಯಾಸಗಳು ಕಂಡುಬಂದರೆ, ಅರ್ಜಿದಾರನನ್ನು ಠಾಣೆಗೆ ಕರೆಯಲಾಗುತ್ತದೆ’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿಪಾಸ್‌ಪೋರ್ಟ್ ಪರಿಶೀಲನೆ ಪ್ರಕ್ರಿಯೆಗಾಗಿ ಅರ್ಜಿದಾರರನ್ನು ಈ ಹಿಂದಿನಂತೆ ಠಾಣೆಗೆ ಕರೆಯುವುದಿಲ್ಲ ಎಂದು ಪಾಂಡೆ ಅವರು ಶನಿವಾರವೇ ಟ್ವೀಟ್ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.