ADVERTISEMENT

ಆಮ್ಲಜನಕದ ಕೊರತೆ ಇಲ್ಲ, ಆತಂಕ ಬೇಡ: ಕೇಂದ್ರ ಗೃಹ ಸಚಿವಾಲಯ

ಪಿಟಿಐ
Published 26 ಏಪ್ರಿಲ್ 2021, 13:34 IST
Last Updated 26 ಏಪ್ರಿಲ್ 2021, 13:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕದ ಸಂಗ್ರಹ ಇದೆ. ಹೀಗಾಗಿ, ಯಾವುದೇ ರೀತಿಯ ಆತಂಕ ಬೇಡ’ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ.

‘ಆದರೆ, ವಿವಿಧ ರಾಜ್ಯಗಳಲ್ಲಿ ಉತ್ಪಾದನೆಯಾಗುತ್ತಿರುವ ಆಮ್ಲಜನಕವನ್ನು ಅತ್ಯಧಿಕ ಬೇಡಿಕೆ ಇರುವ ರಾಜ್ಯಗಳಿಗೆ ಸಾಗಿಸಲು ಸಮಸ್ಯೆಯಾಗುತ್ತಿದೆ. ಸರ್ಕಾರ ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಯತ್ನಿಸುತ್ತಿದೆ’ ಎಂದು ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

‘ಈ ಮೊದಲು ಆಮ್ಲಜನಕ ಕೊಂಡೊಯ್ಯುವ ಟ್ಯಾಂಕರ್‌ಗಳು ಒಟ್ಟಾರೆಯಾಗಿ 4ರಿಂದ 5 ದಿನಗಳ ಸಮಯವನ್ನು ತೆಗೆದುಕೊಳ್ಳುತ್ತಿದ್ದವು. ಈಗ ಅದನ್ನು ಒಂದರಿಂದ ಎರಡು ಗಂಟೆಗೆ ಇಳಿಸಲಾಗಿದೆ. ಇದಕ್ಕಾಗಿ, ಭಾರತೀಯ ವಾಯು ಪಡೆಯ ನೆರವು ಪಡೆಯಲಾಗಿದೆ. ಖಾಲಿ ಟ್ಯಾಂಕರ್‌ಗಳನ್ನು ವಿಮಾನಗಳ ಮೂಲಕ ಸಾಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಆಮ್ಲಜನಕ ಕೊಂಡೊಯ್ಯುವ ಟ್ಯಾಂಕರ್‌ಗಳ ಸಂಚಾರದ ಬಗ್ಗೆ ಕೇಂದ್ರ ಸರ್ಕಾರ ಜಿಪಿಎಸ್‌ ಮೂಲಕ ನಿರಂತರವಾಗಿ ನಿಗಾವಹಿಸಿದೆ. ಅತಿ ಕಡಿಮೆ ಅವಧಿಯಲ್ಲಿ ಆಸ್ಪತ್ರೆಗಳಿಗೆ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.