ADVERTISEMENT

ಶಿಕ್ಷಕರನ್ನು ‘ಸರ್‌‘, ‘ಮೇಡಂ‘ ಅನ್ನುವಂತಿಲ್ಲ: ಕೇರಳ ಮಕ್ಕಳ ಹಕ್ಕುಗಳ ಆಯೋಗ

ರಾಜ್ಯದ ಶಿಕ್ಷಣ ಇಲಾಖೆಗೆ ಮಕ್ಕಳ ಹಕ್ಕುಗಳ ಆಯೋಗ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2023, 9:10 IST
Last Updated 13 ಜನವರಿ 2023, 9:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರಂ: ವಿದ್ಯಾರ್ಥಿಗಳು ಶಿಕ್ಷಕರನ್ನು ‘ಸರ್‌, ‘ಮೇಡಂ‘ ಎಂದು ಸಂಬೋಧಿಸುವ ಬದಲು ‘ಟೀಚರ್‌‘ ಎಂದು ಕರೆಯುವಂತೆ ಸೂಚಿಸಬೇಕು ಎಂದು ರಾಜ್ಯದ ಎಲ್ಲಾ ಶಾಲೆಗಳಿಗೆ ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನಿರ್ದೇಶನ ನೀಡಿದೆ.

‘ಸರ್‌‘, ‘ಮೇಡಂ‘ ಅನ್ನುವುದಕ್ಕಿಂತ ‘ಟೀಚರ್‌‘ ಎನ್ನುವ ಪದ ‘ಲಿಂಗ ತಟಸ್ಥ‘ವಾಗಿರುವುದರಿಂದ ಹೀಗೆ ಕರೆಯಬೇಕು ಎಂದು ಸೂಚಿಸಿದೆ. ಆಲ್ಲದೇ ಶಿಕ್ಷಕರು ಕೂಡ ಈ ಪದಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದಿದೆ.

ಆಯೋಗದ ಮುಖ್ಯಸ್ಥರಾದ ಕೆ.ವಿ ಮನೋಜ್‌ ಕುಮಾರ್‌ ಹಾಗೂ ಸದಸ್ಯ ಸಿ. ವಿಜಯ್‌ ಕುಮಾರ್‌ ಅವರು, ರಾಜ್ಯದ ಶಿಕ್ಷಣ ಇಲಾಖೆಗೆ ಈ ನಿರ್ದೇಶನ ನೀಡಿದ್ದಾರೆ.

ADVERTISEMENT

ಸಮಾನತೆ ಹಾಗೂ ಶಿಕ್ಷಕರೊಂದಿಗಿನ ಬಾಂಧವ್ಯ ಹೆಚ್ಚಿಸುವ ಸಲುವಾಗಿ ಇಂಥಹದ್ದೊಂದು ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.