ADVERTISEMENT

ಅದಾನಿ ಕಂಪನಿಯಿಂದ ಹೊರಬಂದ ನಾರ್ವೆ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 16:08 IST
Last Updated 27 ಫೆಬ್ರುವರಿ 2026, 16:08 IST
ಗೌತಮ್ ಅದಾನಿ
ಗೌತಮ್ ಅದಾನಿ   

ನವದೆಹಲಿ (ಪಿಟಿಐ): ₹109 ಲಕ್ಷ ಕೋಟಿ (1.2 ಟ್ರಿಲಿಯಲ್‌ ಡಾಲರ್‌) ಸಂಪತ್ತು ನಿಧಿ ಹೊಂದಿರುವ ನಾರ್ವೆಯ ಸಾವರಿನ್‌ ವೆಲ್ತ್‌ ಫಂಡ್ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನಿಂದ (ಎಜಿಇಎಲ್‌) ಬಂಡವಾಳ ಹೂಡಿಕೆ ವಾಪಸ್ ಪಡೆಯಲು ನಿರ್ಧರಿಸಿದೆ. ಆರ್ಥಿಕ ಅಪರಾಧಗಳ ನಂಟಿನ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಸಂಸ್ಥೆ ತಿಳಿಸಿದೆ.

2024ರಲ್ಲಿ ಗೌತಮ್‌ ಅದಾನಿ ಒಡೆತನದ ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಜೋನ್‌ ಲಿಮಿಟೆಡ್‌ನಿಂದ ನಾರ್ವೆ ಬ್ಯಾಂಕ್‌ ಬಂಡವಾಳ ವಾಪಸ್ ಪಡೆದಿತ್ತು. ಇದೀಗ ಭ್ರಷ್ಟಾಚಾರ ಮತ್ತು ಗಂಭೀರ ಆರ್ಥಿಕ ಅಪರಾಧಗಳ ಕಾರಣದಿಂದಾಗಿ ಎಜಿಇಎಲ್‌ನಿಂದ ಹೊರ ಬಂದಿರುವುದಾಗಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

2020ರಲ್ಲಿ ನೋರ್ಜೆಸ್ ಬ್ಯಾಂಕ್‌ ಹೂಡಿಕೆ ಮಾಡಿದಾಗ ಎಜಿಎಲ್‌ ಷೇರಿನ ಮುಖಬೆಲೆ ₹341ನಷ್ಟಿತ್ತು. ಸದ್ಯ ಷೇರಿನ ಮೌಲ್ಯ ₹944ಕ್ಕೆ ತಲುಪಿದೆ.

ADVERTISEMENT

ನಾರ್ವೆ ಸಾವರಿನ್‌ ಸಂಸ್ಥೆಯ ಈ ನಿರ್ಧಾರದ ಬಗ್ಗೆ ಅದಾನಿ ಕಂಪನಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಉದ್ಯಮದ ಮೂಲಗಳು ಸಾವರಿನ್ ಫಂಡ್ ಸಂಸ್ಥೆಯು ನವೀಕರಿಸಬಹುದಾದ ಇಂಧನ ಕಂಪನಿ ಬಗ್ಗೆ ಸಲ್ಲದ ಅಪಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.